ನವದೆಹಲಿ: ಲಡಾಖ್ ಪವರ್ ಗ್ರಿಡ್ ಮೇಲೆ ಚೈನಾ ಸೈಬರ್ ದಾಳಿ; ವರದಿ ಬಹಿರಂಗ

Prasthutha|

ನವದೆಹಲಿ: ಚೈನಾ ಬೆಂಬಲಿತ ಹ್ಯಾಕರ್ಸ್ ಗಳು ಲಡಾಖ್ ನಲ್ಲಿರುವ ವಿದ್ಯುತ್ ಸರಬರಾಜು ಕೇಂದ್ರಗಳನ್ನು ಗುರಿಯಾಗಿಸಿ ಸೈಬರ್ ದಾಳಿಗಳನ್ನು ನಡೆಸಿರುವುದಾಗಿ ವರದಿಯಿಂದ ಬಹಿರಂಗವಾಗಿದೆ.

- Advertisement -

ಸದ್ಯ ಗಡಿ ಭಾಗಗಳಲ್ಲಿ ಭಾರತ ಮತ್ತು ಚೈನಾ ಸೇನಾಪಡೆ ಗಸ್ತು ಮುಂದುವರಿಸಿದ್ದು, ಕಳೆದ ಎಂಟು ತಿಂಗಳಲ್ಲಿ ಸೈಬರ್ ದಾಳಿ ನಡೆದಿರುವುದಾಗಿ ‘ರೆಕಾರ್ಡೆಡ್‌ ಫ್ಯೂಚರ್’ ಸಂಸ್ಥೆ ತಿಳಿಸಿದೆ.

ಭಾರತದ ಕನಿಷ್ಠ 7 ವಿದ್ಯುತ್ ರವಾನೆ ಕೇಂದ್ರಗಳನ್ನು ಹ್ಯಾಕರ್ಸ್ ಗಳು ಗುರಿಯಾಗಿಸಿರುವುದನ್ನು ಪತ್ತೆಹಚ್ಚಲಾಗಿದೆ. ಪವರ್ ಗ್ರಿಡ್ ಮತ್ತು ವಿದ್ಯುತ್ ಸರಬರಾಜಿನ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಲಾಗಿದೆ. ಈ ವೇಳೆ ಲಡಾಖ್ ಸಮೀಪದ ವಿದ್ಯುತ್ ರವಾನೆ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ. ಕಳೆದ ಅಗಸ್ಟ್ ನಿಂದ ಈ ವರ್ಷದ ಮಾರ್ಚ್ ವರೆಗೆ ಸೈಬರ್ ದಾಳಿ ನಡೆದಿರುವುದು ಬಹಿರಂಗವಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

- Advertisement -

ಮಾತ್ರವಲ್ಲ ಭಾರತದ ಅತ್ಯಗತ್ಯ ಮೂಲಸೌಕರ್ಯ ವ್ಯವಸ್ಥೆಯ ಕುರಿತು ಚೈನಾದ ಹ್ಯಾಕರ್ಸ್ ಗಳು ಮಾಹಿತಿ ಶೇಖರಿಸುತ್ತಿರುವುದಾಗಿ ರೆಕಾರ್ಡೆಡ್ ಫ್ಯೂಚರ್ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

ಈ ನಡುವೆ ಭಾರತ ಮತ್ತು ಚೈನಾ ಸುಮಾರು 3500 ಕಿ.ಮೀ ಉದ್ದದ ಗಡಿಯನ್ನು ಹಂಚಿದೆ. 2020 ರ ಜೂನ್ ನಲ್ಲಿ ಲಡಾಖ್ ನ ಗಾಲ್ವನ್ ಕಣಿವೆಯಲ್ಲು ಭಾರತ – ಚೈನಾ ಸೈನಿಕರ ಮಧ್ಯೆ ಘರ್ಷನೆ ನಡೆದಿತ್ತು ಮತ್ತು ಭಾರತದ ಹತ್ತಾರು ಸೈನಿಕರು ಹುತಾತ್ಮರಾಗಿದ್ದರು.

Join Whatsapp