ಹೊಸ ಸಂವಿಧಾನವನ್ನು ಒಪ್ಪದ ಚಿಲಿಯ ಜನರು: ಶೇ.61.9ರಷ್ಟು ಜನರಿಂದ ವಿರುದ್ಧ ಮತ

Prasthutha|

ಸ್ಯಾಂಟಿಯಾಗೋ: ಜನರಲ್ ಅಗಸ್ಟೋ ಪಿಂಚೇಟ್ ಅವರು 41 ವರ್ಷಗಳ ಹಿಂದೆ ತನ್ನ ಸರ್ವಾಧಿಕಾರದಡಿ ತಂದಿದ್ದ ಸನ್ನದು ಸಂವಿಧಾನದ ಬದಲಿಗೆ ಹೊಸ ಸಂವಿಧಾನ ತರುವುದನ್ನು ಚಿಲಿಯ ಜನರು ನಿರಾಕರಿಸಿದ್ದು ಹಾಲಿ ಅಧ್ಯಕ್ಷರಾದ ಗ್ಯಾಬ್ರಿಯಲ್ ಬೋರಿಕ್ ರಿಗೆ ಭಾರೀ ಹಿನ್ನಡೆಯಾಗಿದೆ. ಹೊಸ ವಿಚಾರಕ್ಕೆ ಜನರು ಮಣೆ ಹಾಕದಿರುವುದು ಅಚ್ಚರಿಯನ್ನೂ ತಂದಿದೆ.

- Advertisement -

ಭಾನುವಾರ ಸಂಜೆಯ ಹೊತ್ತಿಗೆ 99% ಮತ ಎಣಿಕೆ ನಡೆದಿದ್ದು 61.9% ಜನರು ಹೊಸ ಸಂವಿಧಾನವನ್ನು ನಿರಾಕರಿಸಿದ್ದರೆ, ಹೊಸ ಸಂವಿಧಾನದ ಪರ 38.1% ಜನರು ಮತ ಹಾಕಿದ್ದಾರೆ. ಈ ವಿಷಯದಲ್ಲಿ ಕಡ್ಡಾಯ ಮತದಾನ ಇತ್ತು.

“ಚಿಲಿಯ ಜನರ ಅಭಿಪ್ರಾಯ ನಮಗೆ ಗೊತ್ತಾಯಿತು, ನಾವು ವೇದನೆಯೊಡನೆ ಅದನ್ನು ಕೇಳುತ್ತೇವೆ; ಫಲಿತಾಂಶವನ್ನು ಮಾನ್ಯ ಮಾಡುತ್ತೇವೆ” ಎಂದು ಹೊಸ ಸಂವಿಧಾನ ಒಪ್ಪಿಗೆ ಪಡೆಯ ವಕ್ತಾರ ವ್ಲಾಡೋ ಮಿರೋಸೊವಿಕ್ ಹೇಳಿದರು.

- Advertisement -

ಬೋರಿಕ್ ಹೊಸ ಸಂವಿಧಾನದ ಕರಡು ಅಂತಿಮಗೊಳಿಸಿದವರು. ಚಿಲಿಯ ಜನರಿಗೆ ಈ ಸಂವಿಧಾನ ಹಿಡಿಸಿಲ್ಲ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ.

ಜನರು ಸರ್ವಾಧಿಕಾರ ಬೇಡ ಎಂದು ರಾಜಕೀಯ ಪಕ್ಷಗಳನ್ನು ಆರಿಸಿಕೊಂಡಿದ್ದಾರೆ. ಹಾಗಿರುವುದರಿಂದ ರಾಜಕೀಯ ನಾಯಕರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಗೆ ಮನದಟ್ಟು ಆಗುವಂತೆ ಹೆಚ್ಚು ಮಾತನಾಡಬೇಕು ಎಂದೂ ಬೋರಿಸ್ ಹೇಳಿದರು.

ಹಿಂದಿನ ಸನ್ನದು ಸಂವಿಧಾನವನ್ನು ಸಂವಿಧಾನ ಸಭೆಯೇ ರಚಿಸಿದ್ದು, ಹೆಚ್ಚಿನ ಸಂವಿಧಾನ ಸಮಿತಿ ಸದಸ್ಯರು ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿಲ್ಲ. ಈಗಿನ ಸಂವಿಧಾನ ಆಳುವ ಒಂದು ಪಕ್ಷದ್ದು ಎಂಬ ಗುಮಾನಿ ದೇಶದ 1.9 ಕೋಟಿ ಮತದಾರರದ್ದಿರಬಹುದು.

ನಿರಾಕರಣೆಯೇ ಆಸೆ ಉಳಿಸಿರುವ ದಾರಿ ಎಂಬುದು ನಿರಾಕರಿಸುವವರ ಪರ ವಕ್ತಾರ ಕಾರ್ಲೋಸ್ ಸ್ಯಾಲಿನಸ್ ಅಭಿಪ್ರಾಯವಾಗಿದೆ.

“ಇಂದು ನೀವು ಚಿಲಿಯ ಅಧ್ಯಕ್ಷರಾಗಿರಬಹುದು ಎಂದು ನಾವು ಗ್ಯಾಬ್ರಿಯೆಲ್ ಬೋರಿಕ್ ರಿಗೆ ಹೇಳ ಬಯಸುತ್ತೇವೆ. ನಾವೆಲ್ಲರೂ ಸೇರಿಯೇ ಮುನ್ನಡೆಯಬೇಕಾಗಿರುವುದು ಅನಿವಾರ್ಯ” ಎಂದೂ ಅವರು ಹೇಳಿದರು.

 “ನಮಗೆಲ್ಲ ಹೊಸ ಸಂವಿಧಾನ ಬೇಕು. ಆದರೆ ಒಂದು ಪಕ್ಷದ್ದಾಗಿ ಕಾಣುವುದು ಬೇಕಿಲ್ಲ” ಎನ್ನುವುದು ರಾಬರ್ಟೋ ಬಿಯೋನಿಸ್ ಅಭಿಪ್ರಾಯ.

“ಜನರ ಹಣದ ಮೇಲೆ ಮಾತ್ರ ಕಣ್ಣಿಟ್ಟಿದ್ದ ಪಿಂಚೇಟ್ ಸಂವಿಧಾನ ಹೋಗಬೇಕಿತ್ತು” ಎನ್ನುತ್ತಾರೆ ಇಟಾಲೊ ಹರ್ನಾಂಡೆಜ್.

36 ಪ್ರಾಯದ ಗ್ಯಾಬ್ರಿಯೆಲ್ ಬೋರಿಸ್ ಚಿಲಿಯ ಅತಿ ಚಿಕ್ಕ ಪ್ರಾಯದ ಅಧ್ಯಕ್ಷರು; ಮಾರ್ಚ್ ನಲ್ಲಿ ಗೆದ್ದವರು. ಹೊಸ ಸಂವಿಧಾನಕ್ಕೆ ಎಳೆದಾಟ ಆಗಲೆ ಆರಂಭವಾಗಿತ್ತು.

1973- 1990ರ ಕಾಲದ ನಿರಂಕುಶಾಧಿಕಾರ ಹೋಗಬೇಕು ಎನ್ನುವವರು ಆ ಕಾಲದ ಸಂವಿಧಾನ ತೊಲಗುವುದನ್ನು ಏಕೆ ಬಯಸಿಲ್ಲ ಎನ್ನುವುದು ಚಿದಂಬರ ರಹಸ್ಯ.

ಅಧ್ಯಕ್ಷ ಬೋರಿಸ್ ಅವರು ಇಂದು ಎಲ್ಲ ಪಕ್ಷಗಳ ನಾಯಕರನ್ನು ಈ ವಿಷಯದಲ್ಲಿ ಚರ್ಚೆಗೆ ಕರೆದಿದ್ದು ಭಾರತದ ಕಾಲಮಾನ ಮಧ್ಯರಾತ್ರಿ ಸರ್ವ ಪಕ್ಷಗಳ ತೀರ್ಮಾನ ಏನಾಗುವುದೋ ನೋಡಬೇಕಾಗಿದೆ.




Join Whatsapp