ನಮ್ಮ ಮಕ್ಕಳು ಹೊಸ ವರ್ಷ ಆಚರಿಸುತ್ತಿರುವಾಗ ಗಾಝಾದ ಮಕ್ಕಳನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ: ಪ್ರಿಯಾಂಕಾ ಗಾಂಧಿ

Prasthutha|

ಹೊಸದಿಲ್ಲಿ: ನಮ್ಮ ಮಕ್ಕಳು ಹೊಸ ವರ್ಷ ಆಚರಿಸುತ್ತಿರುವಾಗ ಗಾಝಾದ ಮಕ್ಕಳನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ಹೇಳಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹೊಸ ವರ್ಷದ ಆಗಮನವನ್ನು ಪರಸ್ಪರರಿಗೆ ಶುಭ ಹಾರೈಸಿ ನಾವು ಆಚರಿಸುತ್ತಿರುವಾಗ ಗಾಝಾದಲ್ಲಿ ತಮ್ಮ ಜೀವಿಸುವ ಹಕ್ಕು, ಗೌರವ ಮತ್ತು ಸ್ವಾತಂತ್ರ್ಯದ ಮೇಲೆ ನಿರಂತರ ದಬ್ಬಾಳಿಕೆ ಎದುರಿಸುತಿರುವ ನಮ್ಮ ಗಾಝಾದ ಸೋದರ, ಸೋದರಿಯರನ್ನು ನೆನಪಿಸೋಣ ಎಂದು ಬರೆದುಕೊಂಡಿದ್ದಾರೆ.

Join Whatsapp