ಬೆಂಗಳೂರು: ವಿಯಕಾಂ18 ಹಾಗೂ ನಿಕಲೋಡಿಯೋನ್ ಕೊಡಮಾಡುವ “ನಿಕಲೋಡಿಯೊನ್ ಕಿಡ್ಸ್ ಚಾಯ್ಸ್ ಅವಾರ್ಡ್-2021” ನ ವಿವಿಧ ಪ್ರಶಸ್ತಿಗಳಿಗೆ ಮಕ್ಕಳು ಮತ ಹಾಕಲು ಅವಕಾಶ ಕಲ್ಪಿಸಲಾಗಿದೆ.
ಈ ಕುರಿತು ಮಾತನಾಡಿದ ವಯಾಕಾಂ 18ರ ಮಾಸ್ ಎಂಟರ್ ಟೈನ್ ಮೆಂಟ್ ನ ಮುಖ್ಯಸ್ಥೆ ನಿನಾ ಜೈಪುರಿಯಾ, ಪ್ರತಿ ವರ್ಷದಂತೆ ಈ ವರ್ಷವೂ ಕಿಡ್ಸ್ ಚಾಯ್ಸ್ ಅವಾರ್ಡ್ ಫಂಕ್ಷನ್ ನಡೆಸಲಾಗುತ್ತಿದೆ. ಇದಕ್ಕಾಗಿ ಮಕ್ಕಳಿಂದ ಮತ ನಿರೀಕ್ಷೆ ಮಾಡಲಾಗುತ್ತಿದೆ. ಈ ಬಾರಿ ಒಟ್ಟು 27 ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಅಚ್ಚುಮೆಚ್ಚಿನ ನಟ, ನಟಿ, ಚಲನಚಿತ್ರ, ದಕ್ಷಿಣ ಭಾರತದ ನಟ, ನಟಿ, ಸಂಗೀತ, ಟಿ.ವಿ.ಶೋ. ನಟ ನಟಿಯರು ಹೀಗೆ 27 ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಫೇವರಿಟ್ ಯೂಟೂಬರ್, ಫೇವರಿಟ್ ಡಾನ್ಸರ್, ಫೇವರೆಟ್ ಮೊಬೈಲ್ ಗೇಮ್, ಫೇವರಿಟ್ ಫ್ಯಾಷನ್ ಐಕಾನ್ ಸೇರಿದಂತೆ ಹಲವು ಹೊಸ ವಿಭಾಗಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಮತ ಹಾಕುವ ಅವಕಾಶ ತೆರಯಲಾಗಿದ್ದು, ಮಕ್ಕಳು ಮಾಡಬೇಕಿರುವುದು ಇಷ್ಟೆ. ವೂಟ್, ವೂಟ್ ಕಿಡ್ಸ್ ಅಥವಾ ಜಿಯಾ ಆಪ್ ಮೂಲಕ ತಮ್ಮ ದನಿಯ ಮೂಲಕ ನಿಮ್ಮ ನೆಚ್ಚಿನ ವಿಭಾಗಕ್ಕೆ ಮತ ಹಾಕಬಹುದು. ಮತಗಳನ್ನು ಅನುಸರಿಸಿ ಎಲ್ಲಾ ವಿಭಾಗದಲ್ಲೂ ವಿಜೇತರನ್ನು ಘೊಷಣೆ ಮಾಡಲಾಗುತ್ತದೆ.
ನಿಕಲೋಡಿಯೋನ್ ಮಕ್ಕಳ ಆಸಕ್ತಿಯನ್ನು ತಿಳಿದುಕೊಳ್ಳಲು ಹಾಗೂ ಅವರಿಗೆ ಮನರಂಜನೆ ನೀಡಿ ಅವರ ಆಯ್ಕೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಮಕ್ಕಳ ಕೈಯಿಂದಲೇ ಅಚ್ಚುಮೆಚ್ಚಿನ ನಟ ನಟಿಯನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ ಎಂದರು.
2020ರ ಅವಧಿಯಲ್ಲೂ ಆನ್‌ಲೈನ್ ಮೂಲಕ ಮತ ಪಡೆಯಲು ಅವಕಾಶ ತೆಯಲಾಗಿತ್ತು. ಒಟ್ಟು 1.5 ಮಿಲಿಯನ್ ಮತಗಳು ಸಂಗ್ರಹವಾಗುತ್ತು. ಈ ಬಾರಿಯೂ ಇನ್ನೂ ಹೆಚ್ಚಿನ ಮತ ಪಡೆಯುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.