ಟ್ರಾಫಿಕ್​ ಜಾಮ್​’ಗೆ ಮಗು ಬಲಿ: ವ್ಯಾಪಕ ಆಕ್ರೋಶ

Prasthutha|

ಬೆಂಗಳೂರು: ಮಿತಿಮೀರಿದ ಸಂಚಾರ ದಟ್ಟಣೆಗೆ ಒಂದೂವರೆ ವರ್ಷದ ಕಂದಮ್ಮ ಬಲಿಯಾದ ಮನಕಲಕುವ ಘಟನೆ ನೆಲಮಂಗಲದ ಬಳಿ ನಡೆದಿದೆ.

- Advertisement -

ಅಪಘಾತದಲ್ಲಿ ಗಾಯಗೊಂಡಿದ್ದ ಒಂದೂವರೆ ವರ್ಷದ ಮಗು ಹುದಾ ಕೌಸರ್​​ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್​ ನಲ್ಲಿ ಸಿಲುಕಿಕೊಂಡು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗಲಾಗದೆ ಚಿಕಿತ್ಸೆ ಪಡೆಯಲಾಗದೆ ಮೃತಪಟ್ಟಿದೆ.

ಅಹಮದ್​​, ರುಕ್ಸಾನಾ ದಂಪತಿಯ ಪುತ್ರಿ ಹುದಾ ಕೌಸರ್, ನಿನ್ನೆ ತುಮಕೂರು ಜಿಲ್ಲೆಯ ತಿಪಟೂರಿನ ಕೈಮರಾ ಬಳಿ ಬುಲೆರೋ ವಾಹನ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದಳು.

- Advertisement -

ಈ ವೇಳೆ ತಂದೆ ಅಹಮದ್​​, ತಾಯಿ ರುಕ್ಸಾನಾಗೆ ತಿಪಟೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನ ಹಿಮ್ಸ್​​ಗೆ ರವಾನಿಸಲಾಗಿತ್ತು.

ಬಳಿಕ ಹಿಮ್ಸ್​​​ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಗುವನ್ನು ಬೆಂಗಳೂರಿಗೆ ರವಾನಿಸಲು ಆ್ಯಂಬುಲೆನ್ಸ್ ಮೂಲಕ ಹೋಗುವಾಗ ನೆಲಮಂಗಲ ಬಳಿ ಟ್ರಾಫಿಕ್​ ಜಾಮ್​ ಸಮಸ್ಯೆ ಎದುರಾಗಿದೆ. ಟ್ರಾಫಿಕ್​ ನಿಂದ ಆಸ್ಪತ್ರೆಗೆ ತೆರಳಲಾಗದೆ ಒಂದೂವರೆ ವರ್ಷದ ಹುದಾ ಮೃತಪಟ್ಟಿದ್ದಾಳೆ.

ವಿವಿಧ ಸಂಘಟನೆಗಳ ನೆರವಿನೊಂಗೆ ಜಿರೋ ಟ್ರಾಫಿಕ್ ಮೂಲಕ ನೆಲಮಂಗಲವರೆಗೂ ಆ್ಯಂಬುಲೆನ್ಸ್ ಬೇಗ ಬಂದಿತ್ತು. ಆ್ಯಂಬುಲೆನ್ಸ್​ ಚಾಲಕ ಮಧು ಪರಿಶ್ರಮದಿಂದ ಕೇವಲ ಒಂದೂವರೆ ಗಂಟೆಗೆಲ್ಲಾ ನೆಲಮಂಗಲ ತಲುಪಿದ್ದರು. ಆದರೆ ನೆಲಮಂಗಲದಿಂದ ಟ್ರಾಫಿಕ್ ನಡುವೆ ಸಿಲುಕಿ ದಾರಿಮಧ್ಯೆಯೇ ಬಿಟ್ಟ ಕಂದಮ್ಮ ಪ್ರಾಣ ಬಿಟ್ಟಿದೆ. ಮಗುವನ್ನು ಕಳೆದುಕೊಂಡು ನಡುರಸ್ತೆಯಲ್ಲೇ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

Join Whatsapp