ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾಯುತ್ತಾ ತಾಯಿಯ ತೋಳಿನಲ್ಲೇ ಪ್ರಾಣಬಿಟ್ಟ ಮಗು !

Prasthutha|

ಭೋಪಾಲ್: ಮಧ್ಯಪ್ರದೇಶದಲ್ಲಿ ಮತ್ತೊಂದು ವೈದ್ಯಕೀಯ ನಿರ್ಲಕ್ಷ್ಯ ಘಟನೆ ನಡೆದಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದ ಕಾರಣ ಐದು ವರ್ಷದ ಬಾಲಕನೋರ್ವ ತಾಯಿಯ ತೋಳಿನಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ಜಬಲ್ ಪುರ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಸಂಜಯ್ ಪಾಂಡ್ರೆ ಮತ್ತು ಅವರ ಕುಟುಂಬದ ಸದಸ್ಯರು ಐದು ವರ್ಷ ಪ್ರಾಯದ ರಿಷಿ ಎಂಬ ಬಾಲಕನನ್ನು ಅನಾರೋಗ್ಯ ನಿಮಿತ್ತ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆಸ್ಪತ್ರೆಯ ಹೊರಗೆ ಗಂಟೆಗಟ್ಟಲೆ ಕಾದರೂ ಒಬ್ಬನೇ ಒಬ್ಬ ವೈದ್ಯರು ಅಥವಾ ವೈದ್ಯಕೀಯ ಅಧಿಕಾರಿ ಅನಾರೋಗ್ಯ ಪೀಡಿತ ಮಗುವನ್ನು ನೋಡಲಿಲ್ಲ. ಅನಾರೋಗ್ಯ ತೀವ್ರಗೊಂಡು ತಾಯಿಯ ತೋಳಿನಲ್ಲೇ ಮಗು ಪ್ರಾಣ ಬಿಟ್ಟಿದೆ.


ರಾಜ್ಯದ ಆರೋಗ್ಯ ಮೂಲಸೌಕರ್ಯದ ಕೊರತೆ ಮತ್ತು ವೈಫಲ್ಯವನ್ನು ಈ ಘಟನೆ ಜಗತ್ತಿನ ಮುಂದೆ ಅನಾವರಣ ಮಾಡಿದೆ. ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಎಲ್ಲಾ ಘಟನೆ ನಡೆದ ಬಳಿಕ ವೈದ್ಯಾಧಿಕಾರಿ ಆಸ್ಪತ್ರೆಗೆ ಬಂದಾಗ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡು, ವಿಳಂಬವಾದುದಕ್ಕೆ ಕಾರಣ ಕೇಳಿದರು.
ಆಗ ವೈದ್ಯರು, ನನ್ನ ಪತ್ನಿ ನಿನ್ನೆ ಉಪವಾಸ ಮಾಡುತ್ತಿದ್ದರು. ಆದ್ದರಿಂದ ನಾನು ಆಸ್ಪತ್ರೆಗೆ ತಲುಪಲು ತಡವಾಯಿತು ಎಂದು ಸಮಜಾಯಿಷಿ ನೀಡಿದರು.

Join Whatsapp