ನೀರೆಂದು ಭಾವಿಸಿ ಡೀಸೆಲ್ ಕುಡಿದು ಮಗು ಮೃತ್ಯು

Prasthutha|

ಒಡಿಶಾ: ನೀರೆಂದು ಭಾವಿಸಿ ಬಾಟಲಿಯಲ್ಲಿದ್ದ ಡೀಸೆಲ್ ಕುಡಿದ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಆಟವಾಡುತ್ತಿದ್ದ ಮಗು ಅಪ್ಪನ ವಾಹನವನ್ನು ರಿಪೇರಿ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದು, ಬಾಯಾರಿಕೆ ಆಗಿದ್ದರಿಂದ ನೀರು ಎಂದುಕೊಂಡು ಡೀಸೆಲ್ ಅನ್ನು ಕುಡಿದಿದೆ. ಅದಾದ ಕೆಲವು ನಿಮಿಷಗಳ ನಂತರ ಆ ಮಗು ವಾಂತಿ ಮಾಡಲು ಪ್ರಾರಂಭಿಸಿದೆ.


ಇದರಿಂದ ಗಾಬರಿಯಾದ ಮಗುವಿನ ಪೋಷಕರು ತಕ್ಷಣ ಮಗುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.



Join Whatsapp