ನವದೆಹಲಿ: ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ 17 ವರ್ಷದ ಬಾಲಕನನ್ನು ಚೀನಾ ಸೇನೆ ಅಪಹರಿಸಿದೆ ಎಂಬ ವರದಿಯ ನಂತರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.
ಗಿಡಮೂಲಿಕೆಗಳನ್ನು ಸಂಗ್ರಹಿಸುವ ಮತ್ತು ಬೇಟೆಯಾಡುವ ಯುವಕನೊಬ್ಬ ದಾರಿ ತಪ್ಪಿದ್ದರಿಂದ ಪ್ರೋಟೋಕಾಲ್ ಪ್ರಕಾರ ಅವರನ್ನು ಪತ್ತೆಹಚ್ಚಲು ಮತ್ತು ಹಿಂದಿರುಗಿಸಲು ಸಹಾಯವನ್ನು ಕೋರಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಈಶಾನ್ಯ ರಾಜ್ಯದ ಲುಂಗ್ಟಾ ಜೋರ್ ಪ್ರದೇಶದಿಂದ ಪಿಎಲ್ಎ ಬಾಲಕನನ್ನು ಅಪಹರಿಸಿದೆ ಎಂದು ಸಂಸದ ತಪಿರ್ ಗಾವೊ ಆರೋಪಿಸಿದ ಒಂದು ದಿನದ ನಂತರ “ನಾವು ಮಿರಾಮ್ ಟ್ಯಾರೋನ್ ಅವರ ಕುಟುಂಬದೊಂದಿಗೆ ನಿಂತಿದ್ದೇವೆ ಮತ್ತು ಭರವಸೆಯನ್ನು ಬಿಟ್ಟುಕೊಡುವುದಿಲ್ಲ, ಸೋಲನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಪೂರ್ವ ಲಡಾಕ್ ನಲ್ಲಿರುವ ಪ್ಯಾಂಗೊಂಗ್ ಸರೋವರವನ್ನು ವ್ಯಾಪಿಸಿರುವ ಚೀನಾದ ಸೇತುವೆಯ ನಿರ್ಮಾಣದ ಬಗ್ಗೆ ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಲಕನ ಶೀಘ್ರ ಬಿಡುಗಡೆಗೆ ಕ್ರಮವಹಿಸುವಂತೆ ಭಾರತ ಸರ್ಕಾರದ ಎಲ್ಲಾ ಏಜೆನ್ಸಿಗಳನ್ನು ವಿನಂತಿಸಲಾಗಿದೆ” ಎಂದು ಗಾವೊ ಅವರು ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಭಾರತೀಯ ಸೇನೆಯನ್ನು ಟ್ಯಾಗ್ ಮಾಡಿ ತಿಳಿಸಿದ್ದಾರೆ.
ಈ ಹಿಂದೆ PLA ಸುಬಾನ್ಸಿರಿ ಜಿಲ್ಲೆಯ ಐದು ಹುಡುಗರನ್ನು ಅಪಹರಿಸಿತ್ತು. ಒಂದು ವಾರದ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಅದೇ ವರ್ಷ ಮಾರ್ಚ್ ನಲ್ಲಿ 21 ವರ್ಷದ ಯುವಕನನ್ನು ಅದೇ ಪ್ರದೇಶದಿಂದ ಚೀನೀಯರು ಅಪಹರಿಸಿದ್ದರು, ಭಾರತೀಯ ಸೇನೆಯ ಮಧ್ಯಸ್ಥಿಕೆಯ ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಚೀನಾದಿಂದ ಬಾಲಕನ ಅಪಹರಣ: ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ
Prasthutha|