ಚಿಕ್ಕಮಗಳೂರು: 13 ವರ್ಷದ ಪ್ರೀತಿಗಾಗಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ನಾಟಕವಾಡಿದ್ದ ಪತ್ನಿಯ ನಿಜ ಬಣ್ಣ ತನಿಖೆಯಲ್ಲಿ ಬಯಲಾಗಿದ್ದು, ಇಬ್ಬರು ಯಗಟಿ ಪೊಲೀಸರ ಅತಿಥಿಯಾಗಿದ್ದಾರೆ.
ಇದೀಗ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಡೂರು ತಾಲೂಕಿನ ಹನುಮನಹಳ್ಳಿ ಗ್ರಾಮದ ಪಾವನ ಮತ್ತು ಸಂಜು ಬಂಧಿತ ಇಬ್ಬರು ಆರೋಪಿಗಳು. ಪಾವನಳ ಪತಿ ನವೀನ್ ಕುಮಾರ್ ಆಗಸ್ಟ್ ೬ರಂದು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ವರದಿಯಾಗಿತ್ತು. ಮೃತದೇಹ ಪತ್ತೆಯಾದ ಹಿನ್ನೆಲೆಯನ್ನು ಗಮನಿಸಿ ನವೀನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ, ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಳಿಕ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಕ್ರಮ ಸಂಬಂಧದ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ ಸಿಪಿಐ ಶಿವಕುಮಾರ್ ಮತ್ತು ಪಿಎಸೈ ರಂಗನಾಥ್ ನೇತೃತ್ವದ ಪೊಲೀಸರ ತಂಡ ತನಿಖೆಯನ್ನು ಚುರುಕುಗೊಳಿಸಿ ವಾರದೊಳಗೆ ಕೊಲೆಯ ಪ್ರಕರಣದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ವಿವರ
ಮೃತ ನವೀನ್ ಹಾಗೂ ಕೊಲೆಗಾತಿ ಪಾವನಾಗೆ ಆರು ವರ್ಷದ ಹಿಂದೆ ಮದುವೆಯಾಗಿತ್ತು. 4 ವರ್ಷದ ಹೆಣ್ಣು ಮಗು ಕೂಡ ಇತ್ತು. ಮದುವೆ ನಂತರದ ಪ್ರೇಮಿಯಿಂದ ಗಂಡ ಹೆಂಡತಿಯ ಬಗ್ಗೆ ಆಗಾಗ ಜಗಳ ಕೂಡ ನಡೆಯುತ್ತಿತ್ತು. ಊರಿನ ಹಿರಿಯರು ಹಾಗೂ ಕುಟುಂಬಸ್ಥರು ಮಧ್ಯಸ್ಥಿಕೆವಹಿಸಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದರೆ, ಪ್ರೇಮಿಯನ್ನು ಬಿಡಲು ಒಪ್ಪದ ಪಾವನ ಲವರ್ ಜೊತೆ ಸೇರಿ ಗಂಡನನ್ನ ಮುಗಿಸಿದ್ದಾಳೆ. ಚಪಾತಿ ಕಲಸುವ ನೀರಿಗೆ ನಿದ್ದೆ ಮಾತ್ರೆಯನ್ನ ಬೆರೆಸಿ ಆ ನೀರಿನಿಂದ ಚಪಾತಿ ಹಿಟ್ಟನ್ನ ಕಲೆಸಿ ಚಪಾತಿ ಮಾಡಿದ್ದಳು. ಆ ಚಪಾತಿಯನ್ನು ಪತಿಗೆ ತಿನ್ನಿಸಿದ್ದಳು. ಪತಿ ಜ್ಞಾನ ತಪ್ಪಿದ ಬಳಿಕ ಅವನದ್ದೇ ಬೈಕಿನಲ್ಲಿ ಪ್ರೇಮಿ ಜೊತೆ ಸೇರಿ ಊರಿನಿಂದ ಮೂರು ಕಿಲೋಮೀಟರ್ ದೂರವಿರುವ ಕೆರೆಗೆ ತಂದು ಎಸೆದಿದ್ದಾರೆ. ಆತ್ಮಹತ್ಯೆಯೆಂದು ಬಿಂಬಿಸಲು ಆತನ ಚಪ್ಪಲಿ, ಬ್ಯಾಟರಿ ಸೇರಿದಂತೆ ಇತರೆ ವಸ್ತುಗಳನ್ನ ಕೆರೆಯ ದಡದಲ್ಲಿ ಅಲ್ಲಲ್ಲೇ ಎಸೆದಿದ್ದಾರೆ. ಆಗಸ್ಟ್ 5 ಶನಿವಾರ ರಾತ್ರಿ ದಾನ ತಪ್ಪಿದ ಕಿರಣ್ ನನ್ನ ಕೆರೆಗೆ ಎಸೆದಿದ್ದರು. ಭಾನುವಾರ ಕಿರಣ್ ಮೃತದೇಹ ಪತ್ತೆಯಾಗಿತ್ತು. ಕುಟುಂಬಸ್ಥರು 28 ವರ್ಷದ ಮಗ, ಸಾಲವು ಇರಲಿಲ್ಲ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡೂರು ತಾಲೂಕು ಆಸ್ಪತ್ರೆಯಲ್ಲಿ ಮಾಡಿಸದೆ, ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ತಂದಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಪ್ರೇಮಿ ಜೊತೆ ಸೇರಿ ಹೆಂಡತಿ ಮಾಡಿದ ಕಣ್ಣ ಮುಚ್ಚಾಲೆ ಆಟ ಬಟಾ ಬಯಲಾಗಿತ್ತು.