ಚಿಕ್ಕಮಗಳೂರು: ಅವೈಜ್ಞಾನಿಕ ರಸ್ತೆ ನಿರ್ಮಾಣ; ಕುಸಿಯುತ್ತಿರುವ ಮುಖ್ಯ ರಸ್ತೆ

Prasthutha|

ನರಸಿಂಹರಾಜಪುರ: ಶಿವಮೊಗ್ಗಕ್ಕೆ ಹೋಗುವ ಮುಖ್ಯರಸ್ತೆ ರಸ್ತೆ ಕುಸಿಯಲು ಆರಂಭಿಸಿದ್ದು, ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ರಸ್ತೆ ಬದಿಯ ಬರೆ ಕುಸಿಯುವ ಹಂತದಲ್ಲಿದ್ದು, ಬೃಹತ್ ಗಾತ್ರದ ಮರಗಳು ಬೀಳುವ ಸ್ಥಿತಿಯಲ್ಲಿವೆ. ವಾಹನ ಸವಾರರು ಈ ದಾರಿಯಾಗಿ ಸಂಚರಿಸಲು ಭಯಪಡುತ್ತಿದ್ಧಾರೆ.

- Advertisement -


ಕೆಲವು ವರ್ಷಗಳ ಹಿಂದೆ ಶಿವಮೊಗ್ಗದ ಮುಖ್ಯ ರಸ್ತೆ ಮಡಬೂರು ಗ್ರಾಮದ ಸಮೀಪ ಉಬ್ಬು ತಗ್ಗಿನಿಂದ ಕೂಡಿದೆ ಎಂಬ ಕಾರಣಕ್ಕೆ ರಸ್ತೆಯನ್ನು ಸಮತಟ್ಟಾಗಿ ನಿರ್ಮಿಸಲಾಗಿತ್ತು. ರಸ್ತೆಯನ್ನು ಸಮತಟ್ಟುಗೊಳಿಸಲು ಭಾರಿ ಪ್ರಮಾಣದಲ್ಲಿ ಮಣ್ಣು ಅಗೆದಿದ್ದರಿಂದ ರಸ್ತೆಯ ಇಕ್ಕೆಲಗಳಲ್ಲಿ ಎತ್ತರದ ದಿಣ್ಣೆ ನಿರ್ಮಾಣವಾಗಿತ್ತು. ದಿಣ್ಣೆಯಲ್ಲಿದ್ದ ಮರದ ಬುಡದವರೆಗೂ ಮಣ್ಣನ್ನು ಅಗೆದ ಕಾರಣ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮರದ ಬುಡದ ಮಣ್ಣು ಕುಸಿಯಲು ಪ್ರಾರಂಭಿಸಿದ್ದು, ಯಾವುದೇ ಸಂದರ್ಭದಲ್ಲಿ ಮರಗಳು ರಸ್ತೆ ಮೇಲೆ ಬೀಳುವ ಸಾಧ್ಯತೆಗಳಿವೆ.


ಮಳೆಯಿಂದ ರಸ್ತೆಗೆ ಅಳವಡಿಸಿದ್ದ ಜಲ್ಲಿ, ಟಾರ್ ಮೇಲೆದ್ದು ಗುಂಡಿಗಳು ನಿರ್ಮಾಣವಾಗಿವೆ. ವಾಹನ ಸವಾರರು ಕೈಯಲ್ಲಿ ಜೀವ ಹಿಡಿದು ಹೋಗುವಂತಹ ಸ್ಥಿತಿ ಉಂಟಾಗಿದೆ. ಇತ್ತೀಚೆಗೆ ಮರದ ದಿಮ್ಮಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದರ ಚಕ್ರ ರಸ್ತೆಯ ಗುಂಡಿಯ ಒಳಗೆ ಸಿಲುಕಿಕೊಂಡು ಸಮಸ್ಯೆಯಾಗಿತ್ತು.

- Advertisement -


ರಸ್ತೆಯ ಇನ್ನೊಂದು ಭಾಗದಲ್ಲಿ 33/11 ಕೆ.ವಿ ವಿದ್ಯುತ್ ಮಾರ್ಗ ಹಾದು ಹೋಗಿದ್ದು ಇದಕ್ಕಾಗಿ ದೊಡ್ಡ ವಿದ್ಯುತ್ ತಂತಿಯ ಟವರ್ ಅಳವಡಿಸಲಾಗಿದೆ, ಇದರ ಬುಡದಲ್ಲೂ ಮಣ್ಣು ಅಗೆದಿದ್ದು, ಈ ಭಾಗದಲ್ಲೂ ಮಣ್ಣು ಕುಸಿಯಲು ಆರಂಭಿಸಿದೆ. ಇತ್ತೀಚೆಗೆ ಇಲ್ಲಿ ತಡೆಗೋಡೆ ನಿರ್ಮಿಸಿದ್ದರೂ ಮಣ್ಣು ಕುಸಿಯುವುದು ನಿಂತಿಲ್ಲ.




Join Whatsapp