ಚಿಕ್ಕಮಗಳೂರು: ಗುಡ್ಡ ಕುಸಿತ ತಡೆಗೆ ಡ್ರೋನ್ ಮೂಲಕ ಬೀಜ ಬಿತ್ತನೆ; ಅರಣ್ಯ ಇಲಾಖೆಯ ವಿನೂತನ ಪ್ರಯೋಗ

Prasthutha|

ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ  ಗುಡ್ಡ ಕುಸಿತ ತಡೆಗೆ ಅರಣ್ಯ ಇಲಾಖೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಕಳೆದ ಮೂರ್ನಾಲ್ಕು  ವರ್ಷಗಳ  ಹಿಂದೆ ಮೂಡಿಗೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಬಾರಿ ಗಾಳಿ ಮಳೆಗೆ ಗುಡ್ಡ ಕುಸಿದಿತ್ತು.  ಅದರ ಪರಿಣಾಮವಾಗಿ ಹೆಚ್ಚಿನ ಗಿಡಗಳನ್ನು ಬೆಳೆಸುವ ಮೂಲಕ  ಮಣ್ಣು ಕುಸಿಯದಂತೆ ತಡೆಯಲು  ಮನುಷ್ಯರು  ಹೋಗಿ  ಗಿಡ ನೆಡಲು ಅಸಾಧ್ಯವಾದಂತಹ ಪ್ರದೇಶಗಳಲ್ಲಿ  ಡ್ರೋನ್ ಮೂಲಕ  ಬೀಜ ಬಿತ್ತನೆಗೆ ಮುಂದಾಗಿದೆ.

- Advertisement -

ಚಾರ್ಮಾಡಿ ಘಾಟ್, ಬಿದ್ರುತಳ, ಮದುಗುಂಡಿ, ಮೇಗೂರು, ಸೇರಿದಂತೆ ಹಲವೆಡೆ ಗುಡ್ಡ ಕುಸಿತವಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದಲ್ಲದೇ  ಪ್ರಾಣಹಾನಿ ಕೂಡಾ ಸಂಭವಿಸಿತ್ತು.

ಅಂತಹ ಗ್ರಾಮಗಳನ್ನು ಗುರುತಿಸಿ  ಅಲ್ಲಿ ಇಂದು ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಲಾಗಿದ್ದು , ಗುಡ್ಡ ಕುಸಿತ ತಡೆಗೆ ಪ್ರಯತ್ನ ನಡೆಸಲಾಗಿದೆ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.

- Advertisement -

ಈ ಸಂದರ್ಭದಲ್ಲಿ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್,  ಹಿಟೆನ್ ಪಟೇಲ್, CTO, ಡ್ರೋನ್ ಸಂಸ್ಥಾಪಕ ಗುಜರಾತ್, ಉಪವಲಯ ಅರಣ್ಯಾಧಿಕಾರಿ ರಮೇಶ್, ಅರಣ್ಯ ರಕ್ಷಕ ಪರಮೇಶ್, ಚಾಲಕ ಸುಮಂತ್, ಅರಣ್ಯ ದಿನಕೂಲಿಕ ದಿನೇಶ್ ಇದ್ದರು.



Join Whatsapp