ಚಿಕ್ಕಮಗಳೂರು: ಟೈಲರ್ ಕನ್ಹಯ್ಯಾ ಹತ್ಯೆ ಖಂಡಿಸಿ ಪ್ರತಿಭಟನೆ
Prasthutha: June 29, 2022

ಚಿಕ್ಕಮಗಳೂರು : ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್ ಕನ್ಹಯ್ಯಾ ಹತ್ಯೆಯನ್ನು ಖಂಡಿಸಿ ನಗರದ ಅಜಾದ್ ಪಾರ್ಕ್ ನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಂತಕರನ್ನ ಗಲ್ಲಿಗೇರಿಸವಂತೆ ಒತ್ತಾಯ ಮಾಡಿದರು. ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಕಾರ್ಯಕರ್ತರು ಕನ್ಹಯ್ಯಾ, ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿದರು.
