ಚಿಕ್ಕಮಗಳೂರು : ಶೋಕಿ ಸೈಲೆನ್ಸರ್ ಗಳು ರೋಡ್ ರೋಲರ್ ಗೆ ಬಲಿ

Prasthutha|

ಕಡೂರು: ರಸ್ತೆ ನಿಯಮವನ್ನುಉಲ್ಲಂಘಿಸಿ  ಹೆದ್ದಾರಿಯಲ್ಲಿ ವೀಲಿಂಗ್ ಮಾಡಿ ಪುಂಡಾಟಿಕೆ ತೋರಿದ ಯುವಕರಿಂದ ವಶಪಡಿಸಿಕೊಳ್ಳಲಾದ ಬೈಕ್ ಗಳ  ಸೈಲೆನ್ಸರ್ ಗಳನ್ನು ಪೊಲೀಸರು ಪುಡಿಗಟ್ಟಿದ್ದಾರೆ.

- Advertisement -

ಮಾಡಿಫೈ  ಮಾಡಲ್ಪಟ್ಟ ಸೈಲೆನ್ಸರ್ ಗಳನ್ನು ಕಳಚಿಸಿ ಸಾಲಾಗಿರಿಸಿದ ಪೊಲೀಸರು ಅವುಗಳ ಮೇಲೆ ರೋಡ್ ರೋಲರ್ ಹತ್ತಿಸಿ ಧ್ವಂಸಗೊಳಿಸಿದ್ದಾರೆ. ಹಾಲ್ಫ್ ಹೆಲ್ಮೆಟ್ ಧರಿಸಿ ಪ್ರಯಾಣಿಸುವ ಸವಾರರ ಹೆಲ್ಮೆಟ್ ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯುವಕರ ವೀಲಿಂಗ್ ಹುಚ್ಚಾಟಕ್ಕೆ  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಪಿ ಸೂಚನೆ ಮೇರೆಗೆ ಪೊಲೀಸರು ಬೈಕ್ ಗಳನ್ನು ಸೀಜ್ ಮಾಡಿದ್ದಾರೆ. 



Join Whatsapp