ಚಿಕ್ಕಮಗಳೂರು | ಪ್ರಪಾತಕ್ಕೆ ಉರುಳಿದ ಲಾರಿ: ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರು

Prasthutha|

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಸೋಮನಕಾಡು ಬಳಿ 100 ಅಡಿಯಷ್ಟು ಪ್ರಪಾತಕ್ಕೆ ಲಾರಿ ಉರುಳಿ ಬಿದ್ದಿದ್ದು, ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -


ದಟ್ಟ ಮಂಜು ಮತ್ತು ಮಳೆಯ ನಡುವೆ ದಾರಿ ಕಾಣಿಸದೆ ರಸ್ತೆ ಬದಿ ಇದ್ದ ತಡೆಗೋಡೆಗೆ ಲಾರಿ ಡಿಕ್ಕಿ ಹೊಡೆದಿದೆ. ವೇಗವಾಗಿ ಡಿಕ್ಕಿ ಹೊಡೆದಿದ್ದರಿಂದ ತಡೆಗೋಡೆಯೊಂದಿಗೆ ಲಾರಿ ಪ್ರಪಾತಕ್ಕೆ ಬಿದ್ದಿದೆ.