ಚಿಕ್ಕಮಗಳೂರು : ಕಳಸ- ಹೊರನಾಡು ರಸ್ತೆ ಅವ್ಯವಸ್ಥೆ; ವ್ಯಂಗ್ಯ ಚಿತ್ರಗಳ ಮೂಲಕ ಸಾರ್ವಜನಿಕರ ಆಕ್ರೋಶ

Prasthutha|

ಕಳಸ: ಪಟ್ಟಣದ ಮುಖ್ಯ ರಸ್ತೆಯಿಂದ  ಹೊರನಾಡಿಗೆ ತೆರಳುವ ರಸ್ತೆಯ ದುಸ್ಥಿತಿಯ ಬಗ್ಗೆ ನಾಗರಿಕರು ಸಾಮಾಜಿಕ ಜಾಲ ತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

- Advertisement -

ಕಳಸ ಪಟ್ಟಣದ ರಸ್ತೆ ಅವ್ಯವಸ್ಥೆ ಬಗೆಗಿನ ವ್ಯಂಗ್ಯ ಚಿತ್ರಗಳು ವಾಹನಗಳು ಚಲಿಸದಷ್ಟು ಹೊಂಡ-ಗುಂಡಿಗಳಿಂದ ಹದಗಟ್ಟಿರುವ ರಸ್ತೆ ಕುರಿತಾದ ವ್ಯಂಗ್ಯಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳ ತೀವ್ರ ಮುಜುಗರಕ್ಕೆ ಕಾರಣವಾಗಿವೆ.

- Advertisement -

ಕಳಸ ತಾಲೂಕು ಕೇಂದ್ರವಾಗಿದ್ದರೂ ಅಭಿವೃದ್ದಿ ಶೂನ್ಯ ಎನ್ನುವ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Join Whatsapp