ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಕೆಟ್ಟು ನಿಂತ ಇಂಧನ ಟ್ಯಾಂಕರ್; ಫುಲ್ ಟ್ರಾಫಿಕ್ ಜಾಮ್

Prasthutha|

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಇಂಧನ  ಟ್ಯಾಂಕರ್ ಕೆಟ್ಟು ನಿಂತ ಪರಿಣಾಮ   ರಾತ್ರಿ 10 ಗಂಟೆಯಿಂದ ಬೆಳೆಗ್ಗಿನ 6 ಗಂಟೆವರೆಗೂ  ಫುಲ್ ಟ್ರಾಫಿಕ್ ಜಾಮ್ ಆದ ಘಟನೆ ಚಾರ್ಮಾಡಿ ಘಾಟ್ ನ 10 ನೇ ತಿರುವಿನಲ್ಲಿ ನಡೆದಿದೆ.

- Advertisement -

ಗೂಡ್ಸ್ ವಾಹನಗಳು , ರಾಜಹಂಸ ಬಸ್ಸು, ಪ್ರೈವೇಟ್ ಸ್ಲೀಪರ್ ಕೋಚ್ ಬಸ್ಸುಗಳು, ಮತ್ತು ಚಿಕ್ಕ ವಾಹನಗಳು ಚಾರ್ಮಾಡಿ ಘಾಟ್ ಮತ್ತು ಕೊಟ್ಟಿಗೆಹಾರ ದಲ್ಲಿ ರಾತ್ರಿಯಿಂದ ಬೆಳೆಗ್ಗಿನ ವರೆಗೂ ಸಾಲುಗಟ್ಟಿ ನಿಂತಿತ್ತು. ನಂತರ ಸ್ಥಳಕ್ಕೆ ಧಾವಿಸಿದ ಬೆಳ್ತಂಗಡಿ ಪೊಲೀಸರು ಕ್ರೇನ್ ಮೂಲಕ  ಟ್ಯಾಂಕರ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.



Join Whatsapp