ಚಿಕ್ಕಮಗಳೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರಿಂದ ವಕ್ಫ್ ಆಸ್ತಿಗಳ ಪರಿಶೀಲನೆ

Prasthutha|

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಆಲ್ ಹಾಜ್ ಮುಹಮ್ಮದ್ ಶಾಹಿದ್ ರಝ್ವ ಅವರ ನೇತೃತ್ವದಲ್ಲಿ ಜಿಲ್ಲಾ ವಕ್ಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸ ಕೈಗೊಂಡಿದ್ದರು.

- Advertisement -

ಮೂಡಿಗೆರೆ, ಬಿದರೆಹಳ್ಳಿ, ಹೊರಟ್ಟಿ, ಹಳಕಿ, ಜನ್ನಪುರ, ಗೋಣಿಬೀಡು ಮುಂತಾದ ವಕ್ಫ್ ಬೋರ್ಡ್ ಅಧೀನದಲ್ಲಿರುವ ಸಂಸ್ಥೆಗಳಾದ ಮಸೀದಿಗಳು, ದರ್ಗಾ, ಕಬರಸ್ಥಾನ, ವಾಣಿಜ್ಯ ಮಳಿಗೆಗಳ ಪರಿಶೀಲನೆ ನಡೆಸಲಾಯಿತು. ಸಂಸ್ಥೆಗಳ ಆಡಳಿತ ಸಮಿತಿಯ ಮುಖ್ಯಸ್ಥರಿಂದ ಲೆಕ್ಕ ಪರಿಶೋಧನೆ ನಡೆಸಿ ಆಯಾ ಸಂಸ್ಥೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.

ತಾಲೂಕಿನಾದ್ಯಂತ ಕಬರಸ್ಥಾನಗಳ ಸರ್ವೇಕಾರ್ಯ ನಡೆಸಿ ಕಾಂಪೌಂಡ್ ಗೋಡೆ ನಿರ್ಮಿಸಲು ಅನುದಾನ ಮಂಜೂರು ಮಾಡಿಸುವ ಬಗ್ಗೆ ಚರ್ಚಿಸಲಾಯಿತು. ಮೂಡಿಗೆರೆಯ ಜಾಮಿಯಾ ಮಸೀದಿಗೆ ಆಡಳಿತ ಸಮಿತಿಯ ಅವಧಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ವಕ್ಫ್ ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶ ಬಂದಿರುವ ಆದೇಶ ಪ್ರತಿಯನ್ನು ಸೂಚನಾ ಫಲಕದಲ್ಲಿ ಲಗತ್ತಿಸಿ ಹಿಂದಿನ ಸಮಿತಿಯವರ ಆಡಳಿತಾವಧಿಯ ಕಾರ್ಯ ಪ್ರವೃತ್ತಿಯ ವರದಿಗಳನ್ನು ಪಡೆಯುವ  ಪ್ರಕ್ರಿಯೆಯನ್ನು ಪ್ರಾರಂಭಿಸಿ ಮುಂದಿನ ಕಾರ್ಯ ಚಟುವಟಕೆಗಳಿಗೆ ಅನುವು ಮಾಡಿಕೊಡಲಾಯಿತು.

- Advertisement -

ಈ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಆಲ್ ಹಾಜ್ ಫೈರೋಜ್ ಅಹಮದ್ ರಝ್ವಿ, ಸದಸ್ಯರಾದ ಫಾರೂಕ್ ಸಲೀಂ ರಝ್ವಿ, ಮತ್ತು ಅಧಿಕಾರಿಗಳಾದ ನೂರ್ ಪಾಷಾ, ಸಿಬ್ಬಂದಿ ಅನ್ವರ್, ನವೀದ್ ಪಾಲ್ಗೊಂಡಿದ್ದರು

Join Whatsapp