ಚಿಕ್ಕಮಗಳೂರು: ಕಸಾಯಿಖಾನೆಗಳ ಮುಟ್ಟುಗೋಲು; ನೋಟಿಸ್‌ ನೀಡಲು ನಿರ್ಧಾರ

Prasthutha|

ಚಿಕ್ಕಮಗಳೂರು: ‘ನಗರದಲ್ಲಿ ಹಲವು ಕಸಾಯಿಖಾನೆಗಳನ್ನು ಗುರುತಿಸಿ ತೆರವುಗೊಳಿಸಲಾಗಿದ್ದು, ಜಾನುವಾರು ವಧೆ ಮುಂದುವರಿಸಿದರೆ ಅಂತಹ  ಕಸಾಯಿಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ ತಿಳಿಸಿದ್ದಾರೆ.

- Advertisement -

‘ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆಮಾಡಿ ಮಾಂಸ ಮಾರಾಟ ಮಾಡುತ್ತಿದ್ದ ಕಸಾಯಿಖಾನೆಗಳನ್ನು ತೆರವುಗೊಳಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈಗ 18 ಜಾನುವಾರು ವಧೆ ಮಳಿಗೆಗಳನ್ನು ಗುರುತಿಸಿದ್ದು, ನೋಟಿಸ್‌ ನೀಡಲು ಕ್ರಮ ವಹಿಸಿದ್ದೇವೆ’ ಎಂದು ಹೇಳಿದರು.

ಇನ್ನೂ ಹಲವಾರು ಸಾರ್ವಜನಿಕರ ಮನವಿಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರಗಳನ್ನು ನೀಡಿದರು.



Join Whatsapp