ಚಿಕ್ಕಮಗಳೂರು: ಭಿನ್ನ ಮತೀಯ ವಿವಾಹ ಪ್ರಕರಣ; ಮದುವೆಗೆ ಸಾಥ್ ನೀಡಿದ ಯುವತಿಯ ತಾಯಿ

Prasthutha|

ಚಿಕ್ಕಮಗಳೂರು: ವಿವಾಹ ನೋಂದಣಿಗೆಂದು ಸಬ್ ರಿಜಿಸ್ಟ್ರಾರ್ ಕಛೇರಿಗೆ ತೆರಳಿದ್ದ ಭಿನ್ನ ಮತೀಯ ಜೋಡಿಯನ್ನು ಹಿಂದುತ್ವ ಕಾರ್ಯಕರ್ತರು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ತಾಲೂಕಿನ ದಾಸರಹಳ್ಳಿ ಸಮೀಪ ಲಕ್ಷ್ಮೀಪುರದಲ್ಲಿ ನಡೆದಿದೆ.

- Advertisement -

ಪ್ರಕರಣದ ಬಗ್ಗೆ ಚಿಕ್ಕಮಗಳೂರು ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದ್ದು, ಎಸ್​ಪಿ ಉಮಾ ಪ್ರಶಾಂತ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ನೈತಿಕ ಪೊಲೀಸ್​​ಗಿರಿ ನಡೆಸಿದ ನಾಲ್ವರು ಹಿಂದುತ್ವ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಯುವತಿಯನ್ನು ವಿಚಾರಣೆಗೆಂದು ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಆಕೆಯ  ತಾಯಿ ಸ್ಥಳಕ್ಕೆ ಬಂದು ಒಮ್ಮೆ ನನ್ನ ಮಗಳೊಂದಿಗೆ ಮಾತನಾಡಲು ಅವಕಾಶ ನೀಡಿ ಎಂದು ಬೇಡಿಕೊಂಡರು.

- Advertisement -

ಪ್ರೀತಿಸಿದವನನ್ನೇ ಮದುವೆಯಾಗುತ್ತೇನೆಂದು ಹೊರಟಿರುವ ಯುವತಿಗೆ ಆಕೆಯ ತಾಯಿ ಸಾಥ್ ನೀಡಿದ್ದು,ನನ್ನ‌ ಮಗಳು ನನಗೆ ಜೀವ. ಮದುವೆ ಗೆ ನನ್ನ ಒಪ್ಪಿಗೆ ಇದೆ. ಅವಳಿಗೆ ಮತ್ತು ನನ್ನ ಅಳಿಯನಿಗೆ ತೊಂದರೆ ಕೊಡಬಾರದು. ಅವರು ಮದುವೆಯಾಗಲಿ, ನನ್ನ  ಸಂಪೂರ್ಣ ಒಪ್ಪಿಗೆ ಇದೆ. ಅವರು ಹೂವಿನ ಹಾರ ಹಾಕಿಕೊಂಡು ಸೀದಾ ಲಕ್ಷ್ಮೀಪುರಕ್ಕೆ ಬರಬೇಕು ಎಂದು ಹೇಳಿದ್ದಾರೆ.



Join Whatsapp