ಚಿಕ್ಕಮಗಳೂರು: ಆಟಿಕೆ ಎಂದು ತಿಳಿದು ಆಟವಾಡುತ್ತಾ ಏರ್ ಗನ್ ಟ್ರಗರ್ ಒತ್ತಿದ 8 ವರ್ಷದ ಬಾಲಕ ಸಾವು

Prasthutha|

ಚಿಕ್ಕಮಗಳೂರು: ಆಟವಾಡುವ ಗನ್ ಎಂದು ಭಾವಿಸಿ ಏರ್ ಗನ್ ಇಟ್ಟುಕೊಂಡು ಆಡುವಾಗ ಬಾಲಕ ಟ್ರಿಗರ್ ಒತ್ತಿದ್ದು, ತನ್ನ ಎದೆಗೇ ಸ್ವಯಂ ಸಿಡಿಸಿಕೊಂಡು ಬಾಲಕ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಹಕ್ಕಿ-ಪಿಕ್ಕಿ ತಾಂಡಾದಲ್ಲಿ ಘಟನೆ ನಡೆದಿದೆ. ವಿಷ್ಣು ರಾಜ್ (8) ಮೃತ ಬಾಲಕ.

- Advertisement -

ಏರ್ ಗನ್ ಮಿಸ್ ಫೈರ್ ಆಗಿದ್ದು, ಬಾಲಕನ ಎದೆಯ ಭಾಗಕ್ಕೆ ಗುಂಡು ಸಿಡಿದಿದೆ.
ಬಾಲಕನ ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದೇಹ ರವಾನೆ ಮಾಡಲಾಗಿದೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp