ಚಿಕ್ಕಮಗಳೂರು: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪಿಗಳ ಬಂಧನ

Prasthutha|

ಚಿಕ್ಕಮಗಳೂರು: ಕಾನೂನು ಬಾಹಿರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವರನ್ನು ಕಾರ್ಯಾಚರಣೆಯ ಮೂಲಕ ನರಸಿಂಹರಾಜಪುರ ಪೊಲೀಸರು ಸೆರೆ ಹಿಡಿದಿದ್ದಾರೆ.

- Advertisement -


ಮುತ್ತಿನಕೊಪ್ಪ ಗ್ರಾಮಪಂಚಾಯತ್ ವ್ಯಾಪ್ತಿಯ ಬೈರಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಆಡುತ್ತಿದ್ದ ಐವರನ್ನು ಬಂಧಿಸಿದ ಪೊಲೀಸರು 60,000 ರೂಪಾಯಿನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಆರೋಪಿಗಳನ್ನು ಮೋಹನರಾಜ್, ಶಿವಕುಮಾರ್, ಪೀರ್ ಹುಸೇನ್, ಸತೀಶ್ ಎಂದು ಗುರುತಿಸಲಾಗಿದೆ.

- Advertisement -

ನರಸಿಂಹರಾಜಪುರ ತಾಲೂಕಿನ ಬಿ.ಹೆಚ್ ಕೈಮರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ಧೃಢಪಟ್ಟಿದೆ. ಈ ಬಗ್ಗೆ ಎನ್.ಡಿ.ಪಿ.ಎಸ್ ಆಕ್ಟ್ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.


ಕಾರಿನಲ್ಲಿ ಅಕ್ರಮ ಮದ್ಯಮಾರಾಟ ನಡೆಸುತ್ತಿದ್ದ ಶಿವಾನಂದ ಎಂಬಾತನನ್ನು ಬಂಧಿಸಿದ ಪೊಲೀಸರು ಆರೋಪಿಯ ಬಳಿಯಿಂದ 48 ಮದ್ಯದ ಪೌಚುಗಳನ್ನು ವಶಕ್ಕೆ ಪಡೆದಿದ್ದಾರೆ.


ಅಕ್ರಮ ಕೃತ್ಯಗಳನ್ನು, ಕಾನೂನು ಬಾಹಿರ ಚಟುವಟಿಕೆಗಳನ್ನು ಯಾರೇ ನಡೆಸುತ್ತಿದ್ದರೂ ಕೂಡ ಅಂತಹವರ ಮೇಲೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.



Join Whatsapp