ಚಿಕ್ಕಮಗಳೂರು: ಅಪ್ರಾಪ್ತೆಗೆ ಮಗು ಕರುಣಿಸಿದಾತ ಪೊಲೀಸ್ ಅತಿಥಿ

Prasthutha|

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ ಆರೋಪದಲ್ಲಿ ಯುವಕನೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ ಘಟನೆ ಶೃಂಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -


ಆರೋಪಿಯನ್ನು ಕೊಪ್ಪ ತಾಲೂಕಿನ ಅಗಳಗಂಡಿಯ ಧ್ರುವ ಕುಮಾರ್ (27) ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಬಾಲಕಿಯು ಕಾಲೇಜು ವಿದ್ಯಾರ್ಥಿಯಾಗಿದ್ದು, ಆಕೆಗೆ ಮಗುವೂ ಜನಿಸಿದೆ.


ಆರೋಪಿಯನ್ನು ನಿನ್ನೆ ಬಂಧಿಸಿದ ಶೃಂಗೇರಿ ಠಾಣಾ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ ಚಿಕ್ಕಮಗಳೂರಿನ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ಈ ಬಗ್ಗೆ, ಹೆಚ್ಚಿನ ಮಾಹಿತಿ ವಿಚಾರಣೆಯ ಬಳಿಕ ತಿಳಿದು ಬರಲಿದೆ.



Join Whatsapp