ಮುಖ್ಯಮಂತ್ರಿಗಳೇ!. ಸೌಜನ್ಯ, ಮಸೂದ್, ಫಾಝಿಲ್ ಕೊಲೆ ಪ್ರಕರಣವನ್ನು ಯಾವಾಗ ತನಿಖೆ ಮಾಡುತ್ತೀರಿ: ರಿಯಾಝ್ ಕಡಂಬು

Prasthutha|

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೌಜನ್ಯ ಮಸೂದ್, ಫಾಝಿಲ್ ಕೊಲೆ ಪ್ರಕರಣವನ್ನು ಯಾವಾಗ ತನಿಖೆಗೆ ಮಾಡುತ್ತೀರಿ ಎಂದು SDPI ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಹೇಳಿದ್ದಾರೆ.

- Advertisement -


ಉಡುಪಿ ವಿಡಿಯೋ ಪ್ರಕರಣವನ್ನು CIDಗೆ ಒಪ್ಪಿಸಿದ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರಕಾರ BJP RSS ಹೇರುವ ಒತ್ತಡಕ್ಕೆ ಮಣಿದು ಉಡುಪಿ ವಿಡಿಯೋ ಪ್ರಕರಣವನ್ನು CIDಗೆ ಒಪ್ಪಿಸಿದೆ. ಮುಖ್ಯಮಂತ್ರಿಗಳೇ!. ಸೌಜನ್ಯ ಪ್ರಕರಣ, ಇದ್ರೀಸ್, ಮಸೂದ್, ಫಾಝಿಲ್ ಕೊಲೆ ಪ್ರಕರಣ, ಬಾದಾಮಿಯಲ್ಲಿ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣ, ಪಕ್ಷಿಕೆರೆ ವಿಡಿಯೋ ಪ್ರಕರಣಗಳನ್ನು ಯಾವಾಗ ತನಿಖೆಗೆ ಆದೇಶಿಸುತ್ತೀರೆಂದುತ್ತರಿಸಿ ಎಂದು ಪ್ರಶ್ನಿಸಿದ್ದಾರೆ.

Join Whatsapp