ನವದೆಹಲಿ : ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಸ್ಟಾಂಡ್ ಅಪ್ ಕಾಮಿಡಿಯನ್ ಮುನಾವ್ವರ್ ಫಾರೂಕಿಗೆ ಕೋರ್ಟ್ ಗಳು ಜಾಮೀನು ಯಾಕೆ ನಿರಾಕರಿಸಿವೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.
ಸಮಾನತೆಯೆಂದರೆ, ಸಮಾನವಾದ ನ್ಯಾಯ ಲಭ್ಯಗೊಳಿಸುವುದು. ಕಾನೂನಿನ ತತ್ವಗಳನ್ನು ಸಮಾನವಾಗಿ ಜಾರಿಗೊಳಿಸುವುದಾಗಿದೆ. ಆದರೂ ಯಾಕೆ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್, ಕಾಮಿಡಿಯನ್ ಮುನಾವ್ವರ್ ಫಾರೂಕಿಗೆ ಮಾತ್ರ ಕೋರ್ಟ್ ಜಾಮೀನು ನಿರಾಕರಿಸಿದೆ ಎಂದು ಚಿದಂಬರಂ ಹೇಳಿದ್ದಾರೆ.
ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ದಲಿತ ಯುವತಿಯ ಅತ್ಯಾಚಾರ, ಕೊಲೆ ಘಟನೆ ಸಂದರ್ಭ ವರದಿಗೆ ತೆರಳಿದ್ದ ಕಪ್ಪನ್ ವಿರುದ್ಧ ಪೊಲೀಸರು ಕಠಿಣ ಕಾನೂನುಗಳಡಿ ಕೇಸ್ ದಾಖಲಿಸಿ ಬಂಧಿಸಿದ್ದಾರೆ. ಇಂದೋರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಯಾವುದೇ ಸಾಕ್ಷ್ಯವಿಲ್ಲದಿದ್ದರೂ, ಮುನಾವ್ವರ್ ಫಾರೂಕಿ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.