ಪೆಗಾಸಸ್ ಪ್ರಕರಣದಲ್ಲಿ ಭಾರತೀಯ ಕಕ್ಷಿದಾರರನ್ನು ಬಹಿರಂಗಪಡಿಸಿ : ಮೋದಿ ಸರ್ಕಾರಕ್ಕೆ ಚಿದಂಬರಂ ಸವಾಲು

Prasthutha|

ನವದೆಹಲಿ ಜುಲೈ 27: ಇಸ್ರೇಲ್ ಮೂಲದ ಎನ್.ಎಸ್.ಒ ಪೆಗಾಸೆಸ್ ಸ್ಪೈವೇರ್ ಕದ್ದಾಲಿಕೆಯ ಮೂಲಕ ಭಾರತದ ಗಣ್ಯರನ್ನು ಕಣ್ಗಾವಲಿನಲ್ಲಿ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಕೇಂದ್ರ ಮಾಜಿ ಗ್ರಹಸಚಿವ ಪಿ.ಚಿದಂಬರಂ ಪೆಗಾಸೆಸ್ ನ ಭಾರತೀಯ ಕಕ್ಷಿದಾರರ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ಅಂತರಾಷ್ಟ್ರೀಯ ಪತ್ರಕರ್ತರ ಸಂಘ ನಡೆಸಿದ ತನಿಖೆಯ ಆಧಾರದಲ್ಲಿ ‘ದಿ ವೈರ್’ ಮಾಧ್ಯಮವು ಇಸ್ರೇಲ್ ಮೂಲದ ಎನ್.ಎಸ್.ಒ ಸಂಸ್ಥೆಯು ಭಾರತೀಯ ಕಕ್ಷಿದಾರರನ್ನು ಹೊಂದಿದೆಯೆಂದು ವರದಿ ಮಾಡಿದೆ. ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಚಿದಂಬರಂ ಆ ಕಕ್ಷಿದಾರ ಭಾರತ ಸರ್ಕಾರವೇ? ಅಥವಾ ಸರ್ಕಾರದ ಏಜೆನ್ಸಿಯೇ? ಇದು ಖಾಸಗಿ ಘಟಕವೇ? ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ ಸರ್ಕಾರ ಶೀಘ್ರವೇ ಎನ್.ಎಸ್.ಒ ಸಂಸ್ಥೆಯ ಭಾರತೀಯ ಕಕ್ಷಿದಾರರ ಕುರಿತ ಮಾಹಿತಿ ಬಹಿರಂಗಪಡಿಸುವ ಭರವಸೆಯಿದೆ ಎಂದು ಚಿದಂಬರಂ ಸ್ಪಷ್ಟಪಡಿಸಿದರು.

ಪೆಗಾಸೆಸ್ ಕುರಿತು ಸರ್ಕಾರ ಸರಿಯಾಗಿ ಉತ್ತರಿಸದ ನಿಟ್ಟಿನಲ್ಲಿ ಪ್ರತಿಪಕ್ಷಗಳ ಕೋಲಾಹಲವೆಬ್ಬಿಸಿದಾಗ ರಾಜ್ಯಸಭೆಯ ಸಂಸತ್ ಅಧಿವೇಶನವನ್ನು ಸೋಮವಾರ ಸತತ 3 ನೇ ದಿನಕ್ಕೆ ಮುಂದೂಡಲಾಯಿತು.

Join Whatsapp