ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಛತ್ತೀಸಗಢ ಒಪ್ಪಿದೆ: ಸಚಿವ ಪರಮೇಶ್ವರ್

Prasthutha|

ತುಮಕೂರು: ಅನ್ನ ಭಾಗ್ಯ ಯೋಜನೆಗೆ ಬೇಕಾದ 1.50 ಲಕ್ಷ ಟನ್ ಅಕ್ಕಿ ಕೊಡಲು ಛತ್ತೀಸಗಢ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

- Advertisement -


ಈ ಬಗ್ಗೆ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಛತ್ತೀಸಗಢ ಸರ್ಕಾರ ಅಕ್ಕಿ ಕೊಡಲು ಒಪ್ಪಿಗೆ ಸೂಚಿಸಿದ್ದು, ಅಲ್ಲಿಂದ ಸಾಗಣೆ ಮಾಡಲು ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಅನ್ನ ಭಾಗ್ಯ ಯೋಜನೆ ನಿಲ್ಲಿಸುವುದಿಲ್ಲ’ ಎಂದರು.


ಅನ್ನ ಭಾಗ್ಯ ಯೋಜನೆಗೆ ಅಗತ್ಯದಷ್ಟು ಅಕ್ಕಿ ಯಾವುದೇ ಒಂದು ರಾಜ್ಯದಿಂದ ಸಿಗುವುದಿಲ್ಲ. ಹಲವು ರಾಜ್ಯಗಳನ್ನು ಸಂಪರ್ಕಿಸಲಾಗಿದ್ದು, ಎಲ್ಲಿ ಅಕ್ಕಿ ಸಿಕ್ಕರೂ ಖರೀದಿಸಲಾಗುವುದು. ರೈತರ ಬಳಿ ಇದ್ದರೂ ಖರೀದಿ ಮಾಡಲಾಗುವುದು. ಅಕ್ಕಿ ಜತೆಗೆ ಜೋಳ, ರಾಗಿ ಕೊಡಲಾಗುವುದು. ಬಡವರ ಯೋಜನೆ ಮುಂದುವರಿಸಲಾಗುವುದು ಎಂದು ತಿಳಿಸಿದರು.



Join Whatsapp