ರಾಯಪುರ್: ಛತ್ತೀಸ್ ಗಡದ ಕಾಂಗ್ರೆಸ್ ಸರ್ಕಾರ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋ ಮೂತ್ರವನ್ನು ಖರೀದಿಸಲು ಮುಂದಾಗಿದ್ದು, ಪ್ರತಿ ಲೀಟರ್ ಗೋ ಮೂತ್ರಕ್ಕೆ 4ರೂ. ನಿಗದಿಪಡಿಸಲಾಗಿದೆ.
ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ‘ಗೋದಾನ ನ್ಯಾಯ ಯೋಜನೆ’ ಅಂಗವಾಗಿ ಬರುವ ‘ಹರೇಲಿ’ ಹಬ್ಬದಿಂದ ಗೋಮೂತ್ರ ಖರೀದಿ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಗೋಮೂತ್ರ ಖರೀದಿಯಿಂದ ರೈತರಿಗೆ ಆರ್ಥಿಕವಾಗಿ ಅನುಕೂಲ ಆಗಲಿದೆ. ಅಲ್ಲದೇ ರಾಜ್ಯದಲ್ಲಿ ಸಾವಯವ ಮಿಷನ್ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದು ಗೋದಾನ ನ್ಯಾಯ ಯೋಜನೆ ನಿರ್ದೇಶಕ ಅಯ್ಯಜ್ ತಂಬೋಳಿ ಹೇಳಿದ್ದಾರೆ.