ಹಾವೇರಿ: ಛತ್ತೀಸಗಡದಲ್ಲಿ ನಡೆದಿದ್ದ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಾವೇರಿ ಮೂಲದ CRPF ಯೋಧ ರವಿ ಕೆಳಗಿನಮನಿ (26) ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ ತಿಂಗಳಲ್ಲಿ ತನ್ನ ವಿವಾಹ ವಾರ್ಷಿಕೋತ್ಸವ ಮುಗಿಸಿ ಕರ್ತವ್ಯಕ್ಕೆ ತೆರಳಿದ್ದ ಹಾನಗಲ್ ತಾಲೂಕಿನ ಬ್ಯಾತನಾಳ ಗ್ರಾಮದ ಸೈನಿಕ ರವಿ ಕೆಳಗಿನಮನಿ ಮಾರ್ಚ್ 30 ರಂದು ಛತ್ತಿಸಗಡದಲ್ಲಿ ನಡೆದಿದ್ದ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಅವರು ಮೃತಪಟ್ಟಿದ್ದಾರೆ.
ರವಿ ಮೃತದೇಹ ನಾಳೆ ದೆಹಲಿಯಿಂದ ಹುಟ್ಟೂರು ಬ್ಯಾತನಾಳ ಗ್ರಾಮಕ್ಕೆ ತರಲಾಗುತ್ತದೆ. ರವಿ ಅಂತ್ಯಕ್ರಿಯೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಹುತಾತ್ಮ ರವಿ ಅವರ ಪತ್ನಿ ಅಶ್ವಿನಿ 2 ತಿಂಗಳ ಗರ್ಭಿಣಿಯಾಗಿದ್ದಾರೆ.