ಫ್ಯಾಟ್ ಸರ್ಜರಿ ವೈಫಲ್ಯದಿಂದ ಚೇತನಾ ರಾಜ್ ನಿಧನ: ಚಿತ್ರರಂಗದ ವಿರುದ್ಧ ಕಿಡಿಕಾರಿದ ನಟಿ ರಮ್ಯಾ

Prasthutha|

ಬೆಂಗಳೂರು: 22ರ ಪ್ರಾಯದ ನಟಿ ಚೇತನಾ ರಾಜ್ ಅವರು ಫ್ಯಾಟ್ ಸರ್ಜರಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ ವೇಳೆ ಮೃತಪಟ್ಟಿದ್ದು, ಈ ಕುರಿತು ನಟಿ ರಮ್ಯಾ ಚಿತ್ರರಂಗದ ತಾರತಮ್ಯ ಬಗ್ಗೆ ಕಿಡಿಕಾರಿದ್ದಾರೆ.

- Advertisement -

ಪ್ಲಾಸ್ಟಿಕ್ ಸರ್ಜರಿ ಬಳಿಕ ಮೃತರಾದ ಯುವ ನಟಿಯ ಬಗ್ಗೆ ಸುದ್ದಿ ಓದಿ ತಿಳಿದುಕೊಂಡೆ. ಮಹಿಳೆಯರ ಮೇಲೆ ಅಸಹಜವಾದ ಬ್ಯೂಟಿ ಸ್ಟ್ಯಾಂಡರ್ಡ್ ಗಳನ್ನು ಹೇರಲಾಗುತ್ತದೆ. ಯಾವ ರೀತಿ ಕಾಣಬೇಕು ಎಂಬ ಬಗ್ಗೆ ಮಹಿಳೆಯರ ಮೇಲೆ ತೀವ್ರ ಒತ್ತಡ ಇದೆ. 2018ರಲ್ಲಿ ಕಾಲಿನ ಟ್ಯೂಮರ್ ರಿಮೂವಲ್ ಬಳಿಕ ನಾನು ಕೂಡ ದೇಹದ ತೂಕದ ಸಮಸ್ಯೆಯಿಂದ ಕಷ್ಟ ಅನುಭವಿಸಿದೆ. ನಾನು ನನ್ನದೇ ಆದಂತಹ ಮಾರ್ಗದ ಮೂಲಕ ತೂಕ ಕಡಿಮೆ ಮಾಡಿಕೊಂಡೆ. ಅನೇಕ ಶೀಘ್ರ ಪರಿಹಾರಗಳಿಗೆ ಆಕರ್ಷಿತರಾಗುವುದು ಸುಲಭ ಎಂದು ರಮ್ಯಾ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 ‘ಪುರುಷರಿಗೆ ಈ ಬ್ಯೂಟಿ ಸ್ಟ್ಯಾಂಡರ್ಡ್ ಅನ್ವಯ ಆಗಲ್ಲ. (ಯಾರಿಗೂ ಕೂಡ ಅನ್ವಯ ಆಗಬಾರದು). ಡೊಳ್ಳುಹೊಟ್ಟೆ ಇಟ್ಟುಕೊಂಡು, ತಲೆಗೆ ವಿಗ್ ಹಾಕಿಕೊಂಡಿರುವ 65 ವರ್ಷ ವಯಸ್ಸಿನ ನಟನನ್ನು ಈಗಲೂ ಹೀರೋ ಅಂತ ಪರಿಗಣಿಸಲಾಗುತ್ತದೆ. ಆದರೆ ಮಹಿಳೆಯ ವಿಚಾರದಲ್ಲಿ ಹಾಗಿಲ್ಲ. ಆಕೆಯ ದೇಹದ ತೂಕ ಸ್ವಲ್ಪ ಹೆಚ್ಚಿದರೂ ಕೂಡ ಅವಳನ್ನು ಆಂಟಿ, ಅಜ್ಜಿ ಅಂತ ಟ್ರೋಲ್ ಮಾಡಲಾಗುತ್ತದೆ. ಮಹಿಳೆಯರು ಹೇಗಿರಬೇಕು ಎಂಬುದನ್ನು ಜಗತ್ತು ಹೇಳುವುದು ಬೇಡ. ಚಿತ್ರರಂಗ ಬದಲಾಗಬೇಕಿರುವ ಕಾಲ ಇದು. ಸಂಭಾವನೆ ತಾರತಮ್ಯ, ಬ್ಯೂಟಿ ಸ್ಟ್ಯಾಂಡರ್ಡ್, ಪಾತ್ರಗಳ ತಾರತಮ್ಯದ ವಿರುದ್ಧ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಹೋರಾಡಬೇಕು’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

- Advertisement -

ರಮ್ಯಾ ಹೇಳಿದ ಮಾತಿಗೆ ಅನೇಕರು ಸಹಮತ ಸೂಚಿಸಿದ್ದಾರೆ.



Join Whatsapp