ಚೆಂಬೆಳಕಿನ ಕವಿ, ಸುನೀತಗಳ ಸಾಮ್ರಾಟ್ ಚೆನ್ನವೀರ ಕಣವಿ ಇನ್ನಿಲ್ಲ

Prasthutha|

- Advertisement -

ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ಚೆನ್ನವೀರ ಕಣವಿ ಅವರು ಇಂದು ನಿಧನರಾಗಿದ್ದಾರೆ.

ಕೋವಿಡ್ ಸೋಂಕು ತಗುಲಿದ್ದ ಡಾ. ಚೆನ್ನವೀರ ಕಣವಿ ಜನವರಿ 14 ರಂದು ಧಾರವಾಡದ ಎಸ್.ಡಿ.ಎಮ್. ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

- Advertisement -

ಚೆನ್ನವೀರ‌ ಕಣವಿ ಅವರಿಗೆ ಇತ್ತೀಚೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.

ಆರೋಗ್ಯದಲ್ಲಿ ಏರುಪೇರಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.

ಪ್ರಸಾರಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು ಧಾರವಾಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

ಕಣವಿ ಸಾಹಿತ್ಯ

ಕಾವ್ಯಸಂಕಲನ

ಕಾವ್ಯಾಕ್ಷಿ
ಭಾವಜೀವಿ
ಆಕಾಶಬುಟ್ಟಿ
ಮಧುಚಂದ್ರ
ಮಣ್ಣಿನ ಮೆರವಣಿಗೆ
ದಾರಿ ದೀಪ
ನೆಲ ಮುಗಿಲು
ಎರಡು ದಡ
ನಗರದಲ್ಲಿ ನೆರಳು
ಜೀವಧ್ವನಿ
ಕಾರ್ತೀಕದ ಮೋಡ
ಜೀನಿಯಾ
ಹೊಂಬೆಳಕು
ಶಿಶಿರದಲ್ಲಿ ಬಂದ ಸ್ನೇಹಿತ
ಚಿರಂತನ ದಾಹ(ಆಯ್ದ ಕವನಗಳು)
ಹೂವು ಹೊರಳುವವು ಸೂರ್ಯನ ಕಡೆಗೆ
ವಿಮರ್ಶಾಲೇಖನಗಳು ಹಾಗು ಪ್ರಬಂಧ

ಸಂಕಲನಗಳು

ಸಾಹಿತ್ಯಚಿಂತನ
ಕಾವ್ಯಾನುಸಂಧಾನ
ಸಮಾಹಿತ
ಮಧುರಚೆನ್ನ
ಸಮತೋಲನ
ಮಕ್ಕಳ ಕವಿತೆ ಸಂಪಾದಿಸಿ
ಹಕ್ಕಿ ಪುಕ್ಕ
ಚಿಣ್ಣರ ಲೋಕವ ತೆರೆಯೋಣ

ಸಂಪಾದನೆ

ಕನ್ನಡದ ಕಾಲು ಶತಮಾನ
ಸಿದ್ಧಿ ವಿನಾಯಕ ಮೋದಕ
ಕವಿತೆಗಳು

ಸಂಪಾದನೆ (ಇತರರೊಂದಿಗೆ)

ನವಿಲೂರು ಮನೆಯಿಂದ,
ನವ್ಯಧ್ವನಿ,
ನೈವೇದ್ಯ,
ನಮ್ಮೆಲ್ಲರ ನೆಹರೂ,
ಜೀವನ ಸಿದ್ಧಿ,
ಆಧುನಿಕ ಕನ್ನಡ ಕಾವ್ಯ,
Modern Kannada Poetry,
ಸುವರ್ಣ ಸಂಪುಟ,
ರತ್ನ ಸಂಪುಟ,
ಬಾಬಾ ಫರೀದ

ಪ್ರಶಸ್ತಿ ಪುರಸ್ಕಾರಗಳು:

  1. ಇವರ “ಜೀವಧ್ವನಿ” ಎಂಬ ಕೃತಿಗೆ 1981ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
  2. 1996 ರಲ್ಲಿ ಹಾಸನದಲ್ಲಿ ನಡೆದ ಅರವತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಣವಿಯವರು ಅಧ್ಯಕ್ಷರಾಗಿದ್ದರು.
  3. ಆಳ್ವಾಸ್ -ನುಡಿಸಿರಿ 2008 “ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  4. ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ,
  5. ರಾಜ್ಯೋತ್ಸವ ಪ್ರಶಸ್ತಿ,
  6. ಪಂಪ ಪ್ರಶಸ್ತಿ,
  7. ಬಸವ ಗುರು ಕಾರುಣ್ಯ ಪ್ರಶಸ್ತಿ,
  8. ನಾಡೋಜ ಪ್ರಶಸ್ತಿ,
  9. ಕರ್ನಾಟಕ ಕವಿರತ್ನ ಪ್ರಶಸ್ತಿ,
  10. ಅನಕೃ ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು.
  11. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
Join Whatsapp