ಚೆನ್ನೈ: ತನ್ನ ನವಜಾತ ಶಿಶುವನ್ನು ಮಾರಿ ಹಿಂದಿರುಗುತ್ತಿದ್ದ ಮಹಿಳೆಯನ್ನು ದರೋಡೆಕೋರರು ಲೂಟಿ ಮಾಡಿದ ಘಟನೆ
ಚೆನ್ನೈನ ವೆಪ್ಪೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆರಿಗೆಯಾಗಿ ಒಂದು ವಾರದೊಳಗೆ ಯಾಸ್ಮಿನ್ ಎಂಬ ಮಹಿಳೆ ತನ್ನ ಗಂಡು ಮಗುವನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಳು. ಮಗುವನ್ನು ಮಾರಾಟ ಮಾಡಿ ಹಿಂದಿರುಗುವ ವೇಳೆ ತಡೆದು ನಿಲ್ಲಿಸಿ ದರೋಡೆ ಮಾಡಲಾಗಿದೆ.
ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದ ಯಾಸ್ಮಿನ್ ಕೆಲವು ದಿನಗಳ ಹಿಂದೆ ಗರ್ಭಪಾತ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ಅವರಿಗೆ ಜಯಗೀತಾ ಎಂಬ ಮಹಿಳೆಯ ಪರಿಚಯವಾಗುತ್ತದೆ. ಮಗುವಿಗೆ ಜನ್ಮ ನೀಡಿ ತನಗೆ ನೀಡುವುದಾದರೆ ದೊಡ್ಡ ಮೊತ್ತವನ್ನು ನೀಡುವುದಾಗಿ ಜಯಗೀತಾ ಯಾಸ್ಮೀನ್ ಗೆ ತಿಳಿಸಿದ್ದಳು. ನಂತರ ಗರ್ಬಪಾತ ಮಾಡುವುದರಿಂದ ಹಿಂದೆ ಸರಿದ ಯಾಸ್ಮೀನ್ ಹೆರಿಗೆಯ ನಂತರ ತನ್ನ ಮಗುನ್ನು ಮಾರಿದ್ದಾರೆ.
ತನಗೆ ಆರ್ಥಿಕ ಸಂಕಷ್ಟ ಇರುವುದರಿಂದ ತಾನು ಮಗುವನ್ನು ಮಾರಿರುವುದಾಗಿ ಯಾಸ್ಮೀನ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.