ಚೆನ್ನೈ ‘ಸ್ವಿಮ್ಮಿಂಗ್ ಫೂಲ್’ ಆಗಿದೆ ಎಂದ ಬಿಜೆಪಿ ನಾಯಕ| ಈ ಚಿತ್ರ ಗುಜರಾತ್ ನದ್ದು ಎಂದ ಟ್ವಿಟ್ಟರ್ ಬಳಕೆದಾರರು

Prasthutha|

►ಟ್ರೋಲ್ ಗೆ ಪ್ರಯತ್ನಿಸಿ ಮುಖ ಭಂಗಕ್ಕೀಡಾದ ಬಿಜೆಪಿ ನಾಯಕ

- Advertisement -

ಚೆನ್ನೈ: ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿರುವ ಬಗ್ಗೆ ಟ್ವೀಟ್ ಮಾಡಿ ತಮಿಳುನಾಡು ಬಿಜೆಪಿ ನಾಯಕರೊಬ್ಬರು ಟ್ರೋಲ್ ಮಳೆಗೆ ಸಿಲುಕಿದ್ದಾರೆ.

https://twitter.com/SRSekharBJP/status/1457353567862358018?ref_src=twsrc%5Etfw%7Ctwcamp%5Etweetembed%7Ctwterm%5E1457353567862358018%7Ctwgr%5E%7Ctwcon%5Es1_&ref_url=https%3A%2F%2Fwww.mathrubhumi.com%2Fnews%2Findia%2Fchennai-has-turned-into-swimming-pool-says-bjp-leader-twitter-users-says-photo-is-from-gujrat-1.6159106

ಡಿಎಂಕೆ ಆಡಳಿತದಲ್ಲಿ ಒಂದು ದಿನದ ಮಳೆಯಿಂದಾಗಿ ಚೆನ್ನೈ ಈಜುಕೊಳವಾಗಿ ಮಾರ್ಪಟ್ಟಿದೆ ಎಂದು ಪ್ರವಾಹದಿಂದ ಮುಳುಗಿದ ರಸ್ತೆಯೊಂದರ ಚಿತ್ರದೊಂದಿಗೆ ತಮಿಳುನಾಡು ಬಿಜೆಪಿ ಕೋಶಾಧಿಕಾರಿ ಎಸ್.ಆರ್.ಶೇಖರ್ ಟ್ವೀಟ್ ಮಾಡಿದ್ದರು.

- Advertisement -

ಶೇಖರ್ ಅವರ ಟ್ವೀಟ್ ಗೆ ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದು, ಬಿಜೆಪಿ ನಾಯಕ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದು 2017 ರ ಗುಜರಾತ್ ಪ್ರವಾಹದ ಸಂದರ್ಭದಲ್ಲಿ ತೆಗೆದ ಚಿತ್ರವಾಗಿದೆ ಎಂದಿದ್ದಾರೆ.

Join Whatsapp