ಚೆನ್ನೈ ನಿಂದ ದುಬೈಗೆ ಹೊರಟ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ

Prasthutha|

ಚೆನ್ನೈ: ನಗರದಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

- Advertisement -

ಪೊಲೀಸ್ ಕಂಟ್ರೋಲ್ ರೂಂಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿಮಾನ ನಿಲ್ದಾಣದ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ.

ಕರೆ ಬಂದ ಕೂಡಲೇ ಎಚ್ಚೆತ್ತ ಅಧಿಕಾರಿಗಳು ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದೆಯೇ ಎಂದು ಪರಿಶೀಲನೆ ನಡೆಸಿದ್ದು ಅದೊಂದು ಹುಸಿ ಕರೆ ಎನ್ನುವುದು ತಿಳಿದುಬಂದಿದೆ.

- Advertisement -

ಅನಾಮಧೇಯ ಕರೆ ಬಂದ ಪರಿಣಾಮ, ಸುಮಾರು 160 ಪ್ರಯಾಣಿಕರೊಂದಿಗೆ ಬೆಳಿಗ್ಗೆ 7.20 ಕ್ಕೆ ಹೊರಡಲು ಸಿದ್ಧವಾಗಿದ್ದ ಇಂಡಿಗೋ ವಿಮಾನದೊಳಗೆ ಭದ್ರತಾ ಏಜೆನ್ಸಿಗಳು ಶೋಧ ನಡೆಸುತ್ತಿವೆ.

ಬಾಂಬ್ ನಿಷ್ಕ್ರಿಯ ದಳ,ಶ್ವಾನದಳ ತಪಾಸಣೆ ನಡೆದಿದ್ದು ಹುಸಿಕರೆ ಎನ್ನುವುದು ಪತ್ತೆಯಾದ ಕೂಡಲೇ ಕರೆ ಮಾಡಿದ ದುಷ್ಕರ್ಮಿಯ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp