ಚೆನ್ನೈ: ಅಪಘಾತದ 8 ದಿನಗಳ ಬಳಿಕ ಹಿಮಾಚಲದಲ್ಲಿ ಮಾಜಿ ಮೇಯರ್ ಪುತ್ರನ ಶವ ಪತ್ತೆ!

Prasthutha|

ಚೆನ್ನೈ: ಇಲ್ಲಿಯ ಮಾಜಿ ಮೇಯರ್ ಪುತ್ರನ ಮೃತದೇಹ ಅವರ ವಾಹನ ಅಪಘಾತ ಸಂಭವಿಸಿದ 8 ದಿನಗಳ ನಂತರ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಚೆನ್ನೈನ ಮಾಜಿ ಮೇಯರ್ ಸೈದೈ ದುರೈಸಾಮಿ ಅವರ ಪುತ್ರ ವೆಟ್ರಿ ದುರೈಸಾಮಿ (45) ಅವರ ಮೃತದೇಹವು ಅಪಘಾತವಾದ ಸ್ಥಳದಿಂದ ಸುಮಾರು 3 ಕಿಮೀ ದೂರದಲ್ಲಿರುವ ಸಟ್ಲುಜ್ ನದಿಯಿಂದ ವಶಕ್ಕೆ ಪಡೆಯಲಾಗಿದೆ. ಮಹುನ್ ನಾಗ್ ಅಸೋಸಿಯೇಷನ್, ಸುಂದರ್ನಗರ (ಮಂಡಿ) ಮುಳುಗು ತಜ್ಞರು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ಕಿನ್ನೌರ್ ಉಪ ಆಯುಕ್ತ ಅಮಿತ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಶಿಮ್ಲಾದ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

- Advertisement -

ಅಪಘಾತ ಸಂಭವಿಸಿದ ಎರಡು ದಿನಗಳ ನಂತರ ವೆಟ್ರಿ ಅವರ ತಂದೆ ಸೈದೈ ದುರೈಸಾಮಿ ಅವರು ತಮ್ಮ ಮಗನನ್ನು ಹುಡುಕಿಕೊಟ್ಟವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ತನ್ನ ಮಗನನ್ನು ಹುಡುಕಲು ಸಹಾಯ ಮಾಡುವಂತೆ ಸ್ಥಳೀಯ ಜನರಿಗೆ ಮನವಿಯನ್ನೂ ಮಾಡಿದ್ದರು.

ವಾಹನವು ಕಾಜಾದಿಂದ ಶಿಮ್ಲಾಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.



Join Whatsapp