ಹಾಲಿಗೆ ರಾಸಾಯನಿಕ ಬೆರಕೆ: ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತ

Prasthutha|

ಮಂಡ್ಯ: ಹಾಲಿಗೆ ರಾಸಾಯನಿಕ ಕಲಬೆರಕೆ ಮಾಡುತ್ತಿದ್ದ ಹಗರಣ ಪತ್ತೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಮದ್ದೂರು ತಾಲೂಕಿನ ಕೆ.ಹೊನ್ನಗೆರೆ ಡೈರಿಯಿಂದ ಪೂರೈಕೆಯಾಗುತ್ತಿದ್ದ ಹಾಲಿನಲ್ಲಿ ರಾಸಾಯನಿಕ ಮಿಶ್ರಣ ಪತ್ತೆಯಾಗಿತ್ತು. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ ವರ್ಷವಷ್ಟೇ ಹಾಲಿನ ಟ್ಯಾಂಕರ್ ಗೆ ನೀರು ಬೆರೆಸುತ್ತಿದ್ದ ಹಗರಣ ಬೆಳಕಿಗೆ ಬಂದಿತ್ತು. ಪ್ರಕರಣ ಇನ್ನೂ ಸಿಐಡಿ ತನಿಖೆಯಲ್ಲಿರುವಾಗಲೇ ರಾಸಾಯನಿಕ ಕಲಬೆರಕೆ ಹಗರಣ ಬಯಲಾಗಿದೆ.
ಪರೀಕ್ಷೆಯಲ್ಲಿ ಹಾಲಿನ ಗುಣಮಟ್ಟ ಹೆಚ್ಚು ತೋರಿಸುವಂತೆ ಹಾಲಿಗೆ ನೀರು ಹಾಕಿದಾಗ ಕಡಿಮೆ ಕೊಬ್ಬಿನಾಂಶ ತೋರಿಸದಂತೆ ಮಾಡಲು ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಅಧಿಕಾರಿಗಳು ದಾಳಿ ನಡೆಸಿ ಈ ರಾಸಾಯನಿಕ ಕಲಬೆರಕೆ ಪತ್ತೆ ಹಚ್ಚಿದ್ದರು. ಹೊನ್ನಲಗೆರೆ ಡೈರಿ ಪ್ರತಿ ನಿತ್ಯ ಒಟ್ಟು 35 ಕ್ಯಾನುಗಳಲ್ಲಿ ಹಾಲನ್ನು ಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತಿತ್ತು.
ಕ್ಯಾನುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 4 ಕ್ಯಾನುಗಳಲ್ಲಿ ರಾಸಾಯನಿಕೆ ಕಲಬೆರಕೆ ಅಂಶಗಳು ಕಂಡು ಬಂದ ಹಿನ್ನೆಲೆಯಲ್ಲಿ ಒಕ್ಕೂಟಕ್ಕೆ ನೋಟಿಸ್ ನೀಡಿತ್ತು. ಸದ್ಯ ಮನ್ಮುಲ್ ಆಡಳಿತ ಮಂಡಳಿ ಕೆ.ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸಿದೆ.

Join Whatsapp