ರಾಜ್ಯೋತ್ಸವ ಪ್ರಶಸ್ತಿ ಮೊತ್ತದಿಂದ ಆಂಬ್ಯುಲೆನ್ಸ್ ಖರೀದಿ ಮಾಡಿದ ಚಾರ್ಮಾಡಿ ಹಸನಬ್ಬ

Prasthutha|

ಮಂಗಳೂರು: ದಶಕಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಚಾರ್ಮಾಡಿ ಹಸನಬ್ಬರಿಗೆ ರಾಜ್ಯ ಸರಕಾರ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು. ಇದೀಗ ಪ್ರಶಸ್ತಿ ಮೊತ್ತವಾಗಿ ಸಿಕ್ಕ 5 ಲಕ್ಷ ಹಣದಿಂದ ಆಂಬ್ಯುಲೆನ್ಸ್ ಖರೀದಿ ಮಾಡಿದ್ದಾರೆ.

- Advertisement -

ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ ಅವರು, “ಚಾರ್ಮಾಡಿ ಹಸನಬ್ಬ ಚಾರಿಟೇಬಲ್ ಟ್ರಸ್ಟ್” ಅನ್ನು ಸ್ಥಾಪನೆ ಮಾಡಿ ಆ 5 ಲಕ್ಷ ಮೊತ್ತ ಹಾಗು ಉಳಿದ ಹಣವನ್ನು ಸಾಲ ಮಾಡಿ ಒಂದು ಆಂಬುಲೆನ್ಸ್ ಬುಕ್ ಮಾಡಿದ್ದೆವು. ಇಂದು ಆ ಆಂಬ್ಯುಲೆನ್ಸ್ ನ ಡೆಲಿವರಿ ಪಡಿಯಲಾಯಿತು. ಅದಕ್ಕೆ ಬೇಕಾಗುವ ಸ್ಟ್ರೆಟಿಚೆರ್ ಹಾಗು ಇತ್ಯಾದಿಯನ್ನು ಅಳವಡಿಸಿ ಇನ್ನು ಕೆಲವು ದಿನಗಳಲ್ಲಿ ಚಾರ್ಮಾಡಿಯಲ್ಲಿ ಸೇವೆಯನ್ನು ಪ್ರಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.

ಚಾರ್ಮಾಡಿ ಹಸನಬ್ಬ ಅವರು 1980ರ ದಶಕದಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಾಡಿರುವ ಸೇವೆ ಅಮೋಘ. ನೂರಾರು ಅಪಘಾತ ಗಾಯಾಳುಗಳನ್ನು ಅವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಅಲ್ಲದೇ, ತಮ್ಮದೇ ಯುವಕರ ತಂಡ ಕಟ್ಟಿಕೊಂಡು ರಾತ್ರಿ, ಹಗಲೆನ್ನದೇ, ಮಳೆ, ಗಾಳಿ ಎನ್ನದೇ ಪಶ್ಚಿಮ ಘಟ್ಟದಲ್ಲಿ ಅಪಘಾತವಾದರೆ ಅವರ ರಕ್ಷಣೆಗೆ ಧಾವಿಸುತ್ತಿದ್ದರು.



Join Whatsapp