ನವದೆಹಲಿ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯವರ ಫೋಟೋ ಅಳವಡಿಕೆಗೆ ದೇಶಾದ್ಯಂತ ಭಾರೀ ವೀರೋಧ ವ್ಯಕ್ತವಾಗಿದೆ. ಮಾತ್ರವಲ್ಲದೆ ಪ್ರಧಾನಿ ಫೋಟೋವನ್ನು ರಾಷ್ಟ್ರಧ್ವಜದೊಂದಿಗೆ ಬದಲಿಸುವಂತೆ ಒತ್ತಾಯಿಸಿ change.org ಸಹಿ ಸಂಗ್ರಹದ ಮೂಲಕ ದೇಶಾದ್ಯಂತ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಕೋವಿಡ್ ಲಸಿಕೆ ಪ್ರಮಾಣಪತ್ರಗಳು ಬೇರೆ ರಾಷ್ಟ್ರಗಳ ಇಮಿಗ್ರೇಷನ್ ವಿಭಾಗದಲ್ಲಿ ಉಪಯೋಗಿಸಲ್ಪಡುವುದರಿಂದ ಭಾರತೀಯ ಧ್ವಜವನ್ನು ಅಳವಡಿಸುವುದು ಹೆಮ್ಮೆಯ ವಿಷಯವೆಂದು ಅಭಿಯಾನವನ್ನು ಉಲ್ಲೇಖಿಸಿ ಮಾಹಿತಿ ನೀಡಲಾಗಿದೆ. ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಯವರ ಫೋಟೋ ಅಳವಡಿಕೆಗೆ ದೇಶದ್ಯಾಂತ ಜನರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೋ ಅಳವಡಿಕೆಯ ವಿರುದ್ಧ ಕಿಡಿಕಾರಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದು ಕೋವಿಡ್ ಲಸಿಕೆಯಲ್ಲ, ಮೋದಿ ಲಸಿಕೆಯೆಂದು ಕುಟುಕಿದರು. ಮಾತ್ರವಲ್ಲದೆ ಪ್ರಧಾನಿ ಮೋದಿ ಹೆಸರಿನಲ್ಲಿ ಕಾಲೇಜು, ಕ್ರೀಡಾಂಗಣ ಮತ್ತು ಲಸಿಕೆಯನ್ನು ಪ್ರಚಾರಪಡಿಸಲಾಗುತ್ತಿರುವುದು ಖೇಧಕರ. ಭಾರತವನ್ನು ಮೋದಿಸ್ತಾನವೆಂದು ಬದಲಿಸಿದರೂ ಅಚ್ಚರಿಯಿಲ್ಲವೆಂದು ವ್ಯಂಗ್ಯವಾಡಿದ್ದರು.
ಆಗಸ್ಟ್ 10 ರಂದು ರಾಜ್ಯ ಅರೋಗ್ಯ ಖಾತೆ ಸಚಿವ ಭಾರತಿ ಪ್ರವೀಣ್ ಪವಾರ್ ಅವರು ಲಸಿಕಾ ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೋ ಮುದ್ರಿಸುವ ಅಗತ್ಯವನ್ನು ಸಮರ್ಥಿಸಲು ಪ್ರಯತ್ನಿಸಿದ್ದರು. ಆದರೆ ಇದರ ದೇಶಾದ್ಯಂತ change.org ನಲ್ಲಿ ಸಹಿ ಸಂಗ್ರಹದ ಮೂಲಕ ಅಭಿಯಾನವನ್ನು ಅರಂಭಿಸಿರುವುದರಿಂದ ಈ ವಿಷಯ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.