ನವದೆಹಲಿ: ಮುಂಬರುವ 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಲಾಗಿದೆ.
ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ತನ್ನ ಹೊಸ ರಾಜ್ಯಾಧ್ಯಕ್ಷರನ್ನು ಘೋಷಣೆ ಮಾಡಿದೆ.
ಅದರಲ್ಲಿ ಆಂಧ್ರಪ್ರದೇಶದ ನೂತನ ರಾಜ್ಯಾಧ್ಯಕ್ಷರಾಗಿ ಪುರಂದರೇಶ್ವರಿ, ತೆಲಂಗಾಣದಿಂದ ಕಿಶನ್ ರೆಡ್ಡಿ, ಪಂಜಾಬ್ ನಿಂದ ಸುನಿಲ್ ಜಾಖರ್ ಹಾಗೂ ಜಾರ್ಖಂಡ್ ನಿಂದ ಬಾಬುಲಾಲ್ ಮರಾಂಡಿ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ.