ತಮಿಳುನಾಡು: ಮಾಜಿ ಸಚಿವ ಕೆ. ಪೊನ್ಮುಡಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್

Prasthutha|

ಚೆನ್ನೈ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಸಚಿವ ಕೆ. ಪೊನ್ಮುಡಿಯವರಿಗೆ ಮದ್ರಾಸ್ ಹೈಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರ ಜತೆಗೆ ನ್ಯಾಯಾಲಯವು ಪೊನ್ಮುಡಿ ಮತ್ತು ಅವರ ಪತ್ನಿಗೆ ತಲಾ ₹ 50 ಲಕ್ಷ ದಂಡ ವಿಧಿಸಿದೆ.

- Advertisement -

₹ 1.75 ಕೋಟಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಕೆ ಪೊನ್ಮುಡಿ ಅವರಿಗೆ ಮದ್ರಾಸ್ ಹೈಕೋರ್ಟ್ ಗುರುವಾರ 3 ವರ್ಷಗಳ ಸರಳ ಜೈಲು ಶಿಕ್ಷೆ ವಿಧಿಸಿದೆ. 2011ರ ಪ್ರಕರಣ ಇದಾಗಿದ್ದು, 2016ರಲ್ಲಿ ಕೆಳ ನ್ಯಾಯಾಲಯವು ಪೊನ್ಮುಡಿಯನ್ನು ಖುಲಾಸೆಗೊಳಿಸಿತ್ತು. ಇದನ್ನು ಡಿ. 19ರಂದು ಮದ್ರಾಸ್ ಹೈಕೋರ್ಟ್ ರದ್ದು ಮಾಡಿ, ದೋಷಿ ಎಂದು ಸಾರಿತ್ತು.



Join Whatsapp