ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಇಂದು ಆಂಧ್ರ ಬಂದ್​ಗೆ ಕರೆ ನೀಡಿದ ಟಿಡಿಪಿ

Prasthutha|

ಅಮರಾವತಿ: ತೆಲುಗು ದೇಶಂ ಪಕ್ಷ(ಟಿಡಿಪಿ)ದ ವರಿಷ್ಠ ಚಂದ್ರಬಾಬು ನಾಯ್ಡು ಬಂಧನವನ್ನು ವಿರೋಧಿಸಿ ಟಿಡಿಪಿ ಸೋಮವಾರ ಆಂಧ್ರಪ್ರದೇಶದಾದ್ಯಂತ ಬಂದ್​ಗೆ ಕರೆ ನೀಡಿದೆ.

- Advertisement -

 ಆಂಧ್ರಪ್ರದೇಶದ ಸಿಐಡಿ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ನಾಯ್ಡು ಅವರನ್ನು ಶನಿವಾರ (ಸೆಪ್ಟೆಂಬರ್ 8) ಬಂಧಿಸಿತ್ತು. ಅವರನ್ನು ಭಾನುವಾರ (ಸೆಪ್ಟೆಂಬರ್ 10) ಬೆಳಗ್ಗೆ ವಿಜಯವಾಡದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಅವರ ಬಂಧನದ ನಂತರ, ನಾಯ್ಡು ಅವರನ್ನು ಶನಿವಾರ-ಭಾನುವಾರ ಮಧ್ಯರಾತ್ರಿ 3:40 ಕ್ಕೆ ವೈದ್ಯಕೀಯ ಪರೀಕ್ಷೆಗಾಗಿ ವಿಜಯವಾಡದ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಾದ ನಂತರ ನಾಯ್ಡು ಅವರನ್ನು ಮತ್ತೆ ಎಸ್‌ಐಟಿ ಕಚೇರಿಗೆ ಕರೆದೊಯ್ದು, ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.

- Advertisement -

ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ವಿಜಯವಾಡದ ಸ್ಥಳೀಯ ನ್ಯಾಯಾಲಯವು ಭಾನುವಾರ ಚಂದ್ರಬಾಬು ನಾಯ್ಡು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕೌಶಲ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗಪಡಿಸಿಕೊಂಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ 300 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಎಪಿ ಸಿಐಡಿ ಮುಖ್ಯಸ್ಥ ಎನ್ ಸಂಜಯ್ ತಿಳಿಸಿದ್ದಾರೆ.

Join Whatsapp