ಚಂಡೀಗಢ ಮಹಾನಗರ ಪಾಲಿಕೆ: ಹಿರಿಯ ಉಪಮೇಯರ್ ಹುದ್ದೆ ಬಿಜೆಪಿ ತೆಕ್ಕೆಗೆ

Prasthutha|

ಚಂಡೀಗಢ: ಚಂಡೀಗಢ ಮಹಾನಗರ ಪಾಲಿಕೆಯ ಹಿರಿಯ ಉಪ ಮೇಯರ್ ಹುದ್ದೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

- Advertisement -


ಹಿರಿಯ ಉಪಮೇಯರ್ ಹುದ್ದೆಗೆ ಸೋಮವಾರ ನಡೆದ ಮರು ಮತದಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.


ಕುಲ್ ಜೀತ್ ಸಂಧು ಅವರು ಹಿರಿಯ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಸಂಧು ಪರ 19 ಮತಗಳು ಬಿದ್ದರೆ, ಕಾಂಗ್ರೆಸ್ನ ಗುರುಪ್ರೀತ್ ಗಬು ಅವರು 16 ಮತ ಪಡೆದರು. ಒಂದು ಮತವನ್ನು ಅನರ್ಹ ಎಂದು ಘೋಷಿಸಲಾಯಿತು.

- Advertisement -


35 ಮಂದಿ ಸಂಖ್ಯಾಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 17 ಕೌನ್ಸಿಲರ್ಗಳನ್ನು ಹೊಂದಿದೆ. ಫೆ.19ರಂದು ಆಮ್ ಆದ್ಮಿ ಪಕ್ಷದ ಮೂವರು ಕೌನ್ಸಿಲರ್ಗಳು ಬಿಜೆಪಿ ಸೇರಿದ್ದರಿಂದ ಪಕ್ಷದ ಬಲ 14ರಿಂದ 17ಕ್ಕೆ ಏರಿಕೆಯಾಗಿತ್ತು. ಆಮ್ ಆದ್ಮಿ 10, ಕಾಂಗ್ರೆಸ್ 7 ಹಾಗೂ ಶಿರೋಮಣಿ ಅಕಾಲಿದಳ ಓರ್ವ ಕೌನ್ಸಿಲರ್ಗಳನ್ನು ಹೊಂದಿವೆ.

Join Whatsapp