ಕಿಡಿಗೇಡಿಗಳ ಚಾಮರಾಜಪೇಟೆ ಬಂದ್ ಅಸ್ತ್ರ ಠುಸ್ : ಸ್ಪಂದಿಸದ ಸಾರ್ವಜನಿಕರು

Prasthutha|

ಬೆಂಗಳೂರು: ಆಟದ ಮೈದಾನ ಉಳಿಸಿ ಎಂದು ಸಂಘಪರಿವಾರದ ಕಾರ್ಯಕರ್ತರು ನೀಡಿದ್ದ ಚಾಮರಾಜಪೇಟೆ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

- Advertisement -

ಈದ್ಗಾ ಮೈದಾನದ ಸುತ್ತಮುತ್ತಲಿನ ನಾಲ್ಕೈದು, ರಸ್ತೆಗಳನ್ನು ಕಿಡಿಗೇಡಿಗಳು ಬಂದ್ ಮಾಡಿಸಿರುವುದನ್ನು ಬಿಟ್ಟರೆ, ಈ ಕ್ಷೇತ್ರದ ಕೆ ಆರ್ ಮಾರುಕಟ್ಟೆ, ಜಗಜೀವನರಾಮ್ ನಗರ, ಆಜಾದ್ ನಗರ, ರಾಯಪುರ, ಛಲವಾದಿಪಾಳ್ಯ, ಸಿದ್ಧಾರ್ಥ್ ನಗರ, ದೊರೆಸ್ವಾಮಿ ನಗರ, ಟಿಪ್ಪುನಗರ, ಮೈಸೂರು ರಸ್ತೆ,  ರಾಘವೇಂದ್ರ ಕಾಲೋನಿ, ದಾಸಪ್ಪ ಬಡಾವಣೆ ಸೇರಿದಂತೆ ಏಳೂ ವಾರ್ಡ್ ಗಳಲ್ಲಿನ ಯಾವ ಪ್ರದೇಶಗಳಲ್ಲೂ ಬಂದ್ ಗೆ ಜನ ಕ್ಯಾರೆ ಅಂದಿಲ್ಲ. ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.

ವಾಹನ ಸಂಚಾರ ಸುಗಮವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಹಾಗಾಗಿ ಕಿಡಿಗೇಡಿಗಳು ದುರುದ್ದೇಶದಿಂದ ಕರೆ ನೀಡಿದ್ದ ಚಾಮರಾಜಪೇಟೆ ಬಂದ್ ಅಸ್ತ್ರ ಸಂಪೂರ್ಣ ಠುಸ್ ಆಗಿದೆ.

- Advertisement -

ಕೆಲವೆಡೆ ಬಲತ್ಕಾರದ ಬಂದ್ ಮಾಡಲು ಪ್ರಯತ್ನಿಸಲಾಗಿದ್ದು, ಅದನ್ನು ಪೊಲೀಸರು ಮತ್ತು ಸಾರ್ವಜನಿಕರು ವಿಫಲಗೊಳಿಸಿದ್ದಾರೆ.

ಚಾಮರಾಜಪೇಟೆ ಮಂಡಿಪೇಟೆ ಸಂಘದ ಅಧ್ಯಕ್ಷ  ದಿನೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮರಾಜಪೇಟೆ ಬಂದ್ ಗೆ ಕರೆ ಕೊಟ್ಟಿರುವ ಕಿಡಿಗೇಡಿಗಳು ಇಂದು ಈದ್ಗಾ ಮೈದಾನದ ಸುತ್ತಮುತ್ತಲಿನ ನಾಲ್ಕೈದು ರಸ್ತೆಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ. ಅದನ್ನು ಹೊರತುಪಡಿಸಿ ಚಾಮರಾಜಪೇಟೆಯ ಎಲ್ಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿವೆ. ನಮ್ಮ ಬಳಿಯೂ ಬೆಳಿಗ್ಗೆ ಕೆಲ ಕಿಡಿಗೇಡಿಗಳು ಬಂದು ಅಂಗಡಿಗಳನ್ನು ಮುಚ್ಚಿಸುವಂತೆ ಒತ್ತಾಯ ಮಾಡಿದರು. ಆದರೆ, ನಾವು ಅವರ ಬೆದರಿಕೆಗೆ ಜಗ್ಗಿಲ್ಲ. ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಸಹಬಾಳ್ವೆ ನಡೆಸುತ್ತಿರುವಾಗ ಬಂದ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.



Join Whatsapp