ಅತ್ಯಾಚಾರ ಕೇಸ್ ದಾಖಲಾಗುತ್ತಿದ್ದಂತೆಯೇ ಪರಾರಿಯಾದ ಚಳ್ಳಕೆರೆ ಠಾಣೆ ಸಿಪಿಐ

Prasthutha|

ಚಿತ್ರದುರ್ಗ: ಅತ್ಯಾಚಾರ ಪ್ರಕರಣ ಕೇಸ್ ದಾಖಲಾದ ಬೆನ್ನಲ್ಲೇ ಚಳ್ಳಕೆರೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ (ಸಿಪಿಐ) ಜಿ.ಬಿ ಉಮೇಶ್ ನಾಪತ್ತೆಯಾಗಿದ್ದಾರೆ.

- Advertisement -

ನಿವೇಶನದ ಸಮಸ್ಯೆ ಹಿನ್ನೆಲೆ‌ ಸಹಾಯ ಮಾಡುವ ನೆಪದಲ್ಲಿ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸೋದರ ಮಾವನ ಮಗನಾದ ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧವೇ ಯುವತಿ ಠಾಣೆಯಲ್ಲಿ ದೂರು ನೀಡಿದ್ದರು.

ಐದು ವರ್ಷದ ಹಿಂದೆ ದಾವಣಗೆರೆಯಲ್ಲಿ ಉಮೇಶ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಾವಣಗೆರೆಯ ನಿವೇಶನದ ಸಮಸ್ಯೆ ಹಿನ್ನೆಲೆ ಸಹಾಯ ಕೇಳಿದ್ದೆವು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

- Advertisement -

ಆತ ಕರೆದಾಗ ಹೋಗದಿದ್ದಕ್ಕೆ ಶಿವಮೊಗ್ಗಕ್ಕೆ ಬಂದು ಬಲತ್ಕಾರ ಮಾಡಿದ್ದಾರೆ. ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪವೂ ಕೇಳಿ ಬಂದಿದೆ.

ಸಿಪಿಐ ಉಮೇಶ್ ಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದಾರೆ. 3ನೇ ಪತ್ನಿಯಾಗಿ ಇರುವಂತೆ ಸಿಪಿಐ ಉಮೇಶ್ ಒತ್ತಡ ಹೇರಿದ್ದಾರೆ. ದಾವಣಗೆರೆಯ ನಿವೇಶನ ನಿನಗೆ ಸಿಗದಂತೆ ಮಾಡುತ್ತೇನೆ. ನಿಮ್ಮ ತಂದೆ-ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುವುದಾಗಿ ಯುವತಿ ಆರೋಪಿಸಿದ್ದಾಳೆ.

ಸಿಪಿಸಿ ಕಲಂ 376 ಕ್ಲಾಸ್ (2)(ಇ)(ಟಿ), 323 (ಗಾಯಗೊಳಿಸುವುದು), 504 (ಉದ್ದೇಶ ಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಸಿಪಿಐ ಜಿ.ಬಿ. ಉಮೇಶ್ ನಾಪತ್ತೆಯಾಗಿದ್ದಾನೆ.



Join Whatsapp