ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ: ವೈದ್ಯೆ ಡಾ.ಅಸೀಮಾ ಬಾನು

Prasthutha|

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಅವರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾಗಲೇ ಬಾಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದರು. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚೈತ್ರಾ ಅವರಿಗೆ ಪಿಡ್ಸ್ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

- Advertisement -


ಚೈತ್ರಾ ಕುಂದಾಪುರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆ ವೈದ್ಯೆ ಡಾ.ಅಸೀಮಾ ಬಾನು, ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಚೈತ್ರಾ ಕುಂದಾಪುರ ಸಿಟಿ ಸ್ಕ್ಯಾನ್, ಇಸಿಜಿ ರಿಪೋರ್ಟ್ ನಾರ್ಮಲ್ ಇದೆ. ಚೈತ್ರಾ ಕುಂದಾಪುರಗೆ ನಡೆಸಿದ ಎಲ್ಲಾ ಟೆಸ್ಟ್ ನಲ್ಲೂ ನಾರ್ಮಲ್ ಇದೆ. ಅವರನ್ನು ಆಸ್ಪತ್ರೆಗೆ ಕರೆತಂದಾಗ ಮೂರ್ಛೆ ರೋಗ ಇರಲಿಲ್ಲ. ಸದ್ಯ ಐಸಿಯುನಲ್ಲಿ ಚೈತ್ರಾ ಕುಂದಾಪುರಗೆ ಚಿಕಿತ್ಸೆ ಮುಂದುವರಿಸಿದ್ದೇವೆ ಎಂದರು.