ಬಿಜೆಪಿ ನಾಯಕರ ಚಡ್ಡಿ ಬಿಚ್ಚುವ ಪುರಾಣವನ್ನು ಇಡೀ ದೇಶ ನೋಡಿದೆ: ಕಾಂಗ್ರೆಸ್ ವ್ಯಂಗ್ಯ

Prasthutha|

ಬೆಂಗಳೂರು: ಬಿಜೆಪಿ ನಾಯಕರ ಚಡ್ಡಿ ಬಿಚ್ಚುವ ಪುರಾಣವನ್ನು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶ ನೋಡಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

- Advertisement -

ಆರೆಸ್ಸೆಸ್’ನ ಚಡ್ಡಿ ಕುರಿತು ರಾಜ್ಯದಲ್ಲೇ ಕಾವೇರಿದ ಚರ್ಚೆ ನಡೆಯುತ್ತಿರುವ ಮಧ್ಯೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕೆಪಿಸಿಸಿ, ಬಿಜೆಪಿ ನಾಯಕರ ಚಡ್ಡಿ ಪುರಾಣವನ್ನು ಕರ್ನಾಟಕವಷ್ಟೇ ಅಲ್ಲ, ಇಡೀ ದೇಶ ನೋಡಿದೆ. ಇಷ್ಟೆಲ್ಲ ‘ಚಡ್ಡಿ ಅಲರ್ಜಿ’ ಹೊಂದಿರುವವರು ಚಡ್ಡಿ ಸುಟ್ಟರೆ ಬುಡಕ್ಕೆ ಬೆಂಕಿ ಬಿದ್ದಂತೆ ಆಡುತ್ತಿರುವುದೇಕೆ? ಬಿಜೆಪಿ ಮೊದಲು ತಮ್ಮ ನಾಯಕರಿಗೆ ಚಡ್ಡಿ ಕಳಿಸಿಕೊಡಲಿ, ಚಡ್ಡಿಯನ್ನು ಭದ್ರವಾಗಿ ಹಾಕಿಕೊಳ್ಳುವುದನ್ನು ಕಲಿಸಿ ತಮ್ಮ ಮರ್ಯಾದೆ ಕಾಪಾಡಿಕೊಳ್ಳಲಿ ಎಂದು ಲೇವಡಿ ಮಾಡಿದೆ.

ಆರೆಸ್ಸೆಸ್’ನ ಚಡ್ಡಿ ಕುರಿತು ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರದ ಮೂಲಕ ಪ್ರಾರಂಭವಾದ ರಾಜಕೀಯ ತಿಕ್ಕಾಟ ಚಡ್ಡಿಗಳನ್ನು ಬಹಿರಂಗವಾಗಿ ಸುಡುವ ಹಂತಕ್ಕೆ ತಲುಪಿದ್ದು, ಇದು ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.



Join Whatsapp