ಬೀದರ್: ಶಾಹೀನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ನಿಶತ್ ಫಾತಿಮಾ ಸಿಇಟಿ ಪರೀಕ್ಷೆಯಲ್ಲಿ ಪಶು ವೈದ್ಯಕೀಯ ವಿಜ್ಞಾನ (ಬಿವಿಎಸ್ಸಿ) ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ (ಬಿಎನ್‌ವೈಎಸ್) ವಿಭಾಗದಲ್ಲಿ ರಾಜ್ಯಕ್ಕೆ 9ನೇ Rank ಪಡೆದಿದ್ದಾರೆ.
ಕಾಲೇಜಿನ ಉಪನ್ಯಾಸಕರ ನಿರಂತರ ಮಾರ್ಗದರ್ಶನ, ತಂದೆ–ತಾಯಿ ಪ್ರೇರಣೆ ಹಾಗೂ ಸತತ ಅಧ್ಯಯನದ ಫಲವಾಗಿ ರಾಜ್ಯಕ್ಕೆ 9ನೇ ರ್‍ಯಾಂಕ್ ಬಂದಿದೆ ಎಂದು ನಿಶತ್ ಫಾತಿಮಾ ಪ್ರತಿಕ್ರಿಯಿಸಿದ್ದಾರೆ.
ನಿಶತ್ ಫಾತಿಮಾ ಅವರ ತಂದೆ ಗೌಸುದ್ದೀನ್ ಬೀದರ್ ತಾಲ್ಲೂಕಿನ ತಡಪಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ತಾಯಿ ನಸ್ರೀನ್ ಗೃಹಿಣಿಯಾಗಿದ್ದಾರೆ.