ಚೆನ್ನೈನ ಶತಮಾನದ ಹಳೆಯ ಕಟ್ಟಡ ಕುಸಿತ; ಇಬ್ಬರು ಮೃತ್ಯು

Prasthutha|

ಚೆನ್ನೈ: ಚೆನ್ನೈನ ಎನ್ಎಸ್ ಸಿ ಬೋಸ್ ರಸ್ತೆಯಲ್ಲಿನ ಶತಮಾನದ ಹಳೆಯ ಕಟ್ಟಡವೊಂದರ ಭಾಗವು ಶನಿವಾರ ಕುಸಿದು ಬಿದ್ದುದರಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

- Advertisement -

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನ್ನೈನ ಬಹಳಷ್ಟು ಪ್ರದೇಶಗಳು ನೀರಿನಲ್ಲಿ ಮುಳುಗಿವೆ. ಭಾರೀ ಮಳೆ ಇನ್ನೂ ಮೂರು ದಿನ ಮುಂದುವರಿಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಅಗ್ನಿಶಾಮಕ ದಳ ಮತ್ತು ಪೊಲೀಸರು ಕೂಡಲೆ ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಗೆಯೇ ಮಣ್ಣು ಸರಿಸುವ ಕೆಲಸ ಕೂಡ ಜೋರಾಗಿ ನಡೆದಿದೆ.

- Advertisement -

ತಮಿಳುನಾಡು, ಪಾಂಡಿಚೇರಿ, ಕೇರಳಗಳಲ್ಲಿ ಇನ್ನೂ ಮೂರು ದಿನಗಳ ಮಳೆ ಸುರಿಯಲಿದೆ. ಕರ್ನಾಟಕ ಮತ್ತು ಆಂಧ್ರದ ಕೆಲವು ಭಾಗಗಳಲ್ಲಿ ಕೂಡ ಮಳೆ ಸುರಿಯಲಿದೆ.

ಎರಡು ದಿನಗಳಿಂದ ಬೆಂಗಳೂರಿನಲ್ಲೂ ಮಳೆ ಇದೆ. ನಿನ್ನೆ ರಾತ್ರಿ ಮತ್ತು ಶನಿವಾರ ಮುಂಜಾನೆ ಮಂಗಳೂರಿನಲ್ಲೂ ಮಳೆ ಸುರಿದಿದೆ.

ಬಿದ್ದ ಕಟ್ಟಡದ ರಕ್ಷಣಾ ಕಾರ್ಯ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Join Whatsapp