ಕೇಂದ್ರದ ನಿರ್ಲಕ್ಷ್ಯ: ಫೆ. 2ರಿಂದ ಮಮತಾ ಬ್ಯಾನರ್ಜಿ ಧರಣಿ

Prasthutha|

ಕೋಲ್ಕತ್ತ: ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಸಮರ್ಪಕವಾಗಿ ಅನುದಾನ ಸಿಗುತ್ತಿಲ್ಲ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಫೆಬ್ರುವರಿ 2ರಿಂದ ತಾವು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

- Advertisement -

ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಸಮರ್ಪಕವಾಗಿ ಅನುದಾನ ನೀಡುತ್ತಿಲ್ಲ. ನಾವು ಫೆಬ್ರುವರಿ 1ರವರೆಗೆ ಸಮಯ ನೀಡಿದ್ದೇವೆ. ನಾನು ಫೆಬ್ರುವರಿ 2ರಂದು ಧರಣಿ ಕೂರಲಿದ್ದೇನೆ. ಇದು ಬೂತ್‌ ಮಟ್ಟದಲ್ಲಿಯೂ ನಡೆಯಲಿದೆ’ ಎಂದು ಅವರು ಹೇಳಿದರು.



Join Whatsapp