ಕೇಂದ್ರ ಸರ್ಕಾರ ನನ್ನನ್ನು ಬಂಧಿಸಬಹುದು: ಸಿಎಂ ಭೂಪೇಶ್ ಬಘೇಲ್

Prasthutha|

ನವದೆಹಲಿ: ಅವಕಾಶ ಸಿಕ್ಕರೇ ಕೇಂದ್ರ ಸರ್ಕಾರ ನನ್ನನ್ನು ಬಂಧಿಸಬಹುದು ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.

- Advertisement -


ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿದೆ. ಕೇಂದ್ರಕ್ಕೆ ನನ್ನ ಬಂಧಿಸಲು ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಇಲ್ಲದಿದ್ದರೆ, ಇಷ್ಟೊತ್ತಿಗೆ ನನ್ನನ್ನು ಬಂಧಿಸುತ್ತಿದ್ದರು ಎಂದರು.


ಕೇಂದ್ರೀಯ ಸಂಸ್ಥೆಯು ಅಧಿಕಾರಿಗಳನ್ನು ಹಿಡಿದಿಟ್ಟುಕೊಂಡು, ತನ್ನ ವಿರೋಧಿಗಳ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ನಿಮ್ಮನ್ನು ಇಡಿ ಬಂಧಿಸುತ್ತದೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಭೂಪೇಶ್ ಬಘೇಲ್ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಡಿ ಮೂಲಕ ರಾಜಕೀಯ ಷಡ್ಯಂತ್ರ ಮಾಡುತ್ತಿದೆ. ಷಡ್ಯಂತ್ರದ ಭಾಗವಾಗಿಯೇ ಇಂದು ಅನೇಕ ಕಡೆ ದಾಳಿ ಮಾಡುತ್ತಿದೆ ಎಂದು ಹೇಳಿದ್ದಾರೆ.