ಕೇಂದ್ರ ತಂಡ ಅಕಾಲಿಕವಾಗಿ ದಾಳಿ ನಡೆಸಬಾರದಿತ್ತು: ಎನ್ಐಎ ಅಧಿಕಾರಿಗಳ ಮೇಲಿನ ಹಲ್ಲೆಗೆ ಮಮತಾ ಪ್ರತಿಕ್ರಿಯೆ

Prasthutha|

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯ ಭೂಪತಿನಗರಕ್ಕೆ ಬಂದಿದ್ದ ಎನ್​ಐಎ ತಂಡ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳುತ್ತಿದ್ದ ವೇಳೆ ಸ್ಥಳೀಯ ಗುಂಪು ದಾಳಿ ನಡೆಸಿದ್ದ ಕುರಿತು ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಮಮತಾ ಬ್ಯಾನರ್ಜಿ, ಮಧ್ಯರಾತ್ರಿಯಲ್ಲಿ ಎನ್​ಐಎ ತಂಡವು ಯಾಕೆ ದಾಳಿ ನಡೆಸಬೇಕಿತ್ತು? ಅಕಾಲಿಕವಾಗಿ ದಾಳಿ ನಡೆಸಲು ತಂಡಕ್ಕೆ ಅಗತ್ಯ ಅನುಮತಿ ಇದೆಯೇ? ಅಲ್ಲದೆ, ಮಧ್ಯರಾತ್ರಿಯಲ್ಲಿ ದಾಳಿ ಮಾಡಲು ಪೊಲೀಸರಿಂದ ಅನುಮತಿ ಪಡೆದಿದ್ದಾರಾ? ಮಧ್ಯರಾತ್ರಿಯಲ್ಲಿ ಅಪರಿಚಿತರು ತಮ್ಮ ಸ್ಥಳಕ್ಕೆ ಬಂದರೆ ಸ್ಥಳೀಯರು ಇದೇ ರೀತಿ ಪ್ರತಿಕ್ರಿಯಿಸೋದು ಎಂದು ಹೇಳಿದ್ದಾರೆ.

ಮಧ್ಯರಾತ್ರಿ ತಮ್ಮ ಗ್ರಾಮದಲ್ಲಿ ಅಪರಿಚಿತರನ್ನ ಕಂಡರೆ ಗ್ರಾಮಸ್ಥರು ಏನ್ ಮಾಡ್ತಾರೆ? ಇಲ್ಲೂ ಅದೇ ನಡೆದಿದೆ. ಅಲ್ಲದೆ ಚುನಾವಣೆ ಸಮಯದಲ್ಲೇ ಅಧಿಕಾರಿಗಳ ಈ ದಾಳಿ ನಡೆಸುತ್ತಿರುವುದೇಕೆ? ನಮ್ಮ ಬೂತ್​ ಏಜೆಂಟ್​ರನ್ನೆಲ್ಲಾ ಬಂಧಿಸ್ತಾರಾ? ಎನ್​ಐಎ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಬಿಜೆಪಿಯ ಕೊಳಕು ರಾಜಕಾರಣದ ವಿರುದ್ಧ ನಿಲ್ಲುವಂತೆ ನಾನು ಇಡೀ ಜಗತ್ತಿಗೆ ಮುಂದೆ ಮನವಿ ಮಾಡುತ್ತೇವೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.



Join Whatsapp